ಟೇಬಲ್ ಟೆನ್ನಿಸ್‌ಗೂ ಬೇಕು ಪ್ರೋತ್ಸಾಹ: ಪ್ರೊ.ಲಿಂಗಣ್ಣ

ಟೇಬಲ್ ಟೆನ್ನಿಸ್‌ಗೂ ಬೇಕು ಪ್ರೋತ್ಸಾಹ: ಪ್ರೊ.ಲಿಂಗಣ್ಣ

ದಾವಣಗೆರೆ,ನ.15-  ಟೇಬಲ್ ಟೆನಿಸ್ ಕ್ರೀಡೆ ಗ್ರಾಮೀಣ ಪ್ರದೇಶದ ಕ್ರೀಡೆಯಲ್ಲ. ಈ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಪ್ರಮಾಣ ಕಡಿಮೆ. ಇದು ವಿದ್ಯಾರ್ಥಿಗಳ ತಪ್ಪಲ್ಲ. ಎಲ್ಲಾ ಕಾಲೇಜುಗಳಲ್ಲಿ ಈ ಕ್ರೀಡೆಯ ತರಬೇತಿಯಿಲ್ಲ.  ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಬ್ಯಾಡ್ಮಿಂಟನ್  ಮುಂತಾದ ಆಟಗಳಿಗೆ ಸಿಕ್ಕಂತಹ ಪ್ರೋತ್ಸಾಹ  ಟೇಬಲ್ ಟೆನ್ನಿಸ್ ಕ್ರೀಡೆಗೂ ಸಿಗಬೇಕು ಎಂಬ ಆಶಯವನ್ನು  ಮಾಜಿ ಶಾಸಕ  ಪ್ರೊ. ಎನ್. ಲಿಂಗಣ್ಣ ವ್ಯಕ್ತಪಡಿಸಿದರು. 

ನಗರದ ಎ.ಆರ್.ಎಂ.ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ದಾ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರುಗಳ ಸಹಯೋಗದಲ್ಲಿ ದಾವಿವಿ  ಅಂತರ್ ಕಾಲೇಜುಗಳ ಟೇಬಲ್ ಟೆನ್ನಿಸ್ ಪುರುಷ ಮತ್ತು ಮಹಿಳಾ ಪಂದ್ಯಾವಳಿ ಮತ್ತು  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಹಿರಿಯ ತರಬೇತಿದಾರರನ್ನು ಗುರುತಿಸಿ, ಅವರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಮುಖ್ಯವಾಗಿ ಕ್ರೀಡಾ ಮನೋಭಾವನೆ  ಬೆಳೆಸಿಕೊಳ್ಳಬೇಕು.  ಆಟವನ್ನು ದ್ವೇಷದ ಭಾವನೆಯಿಂದ ಆಡಬಾರದು. ಒಳ್ಳೆಯ ಮನಸ್ಸಿನಿಂದ ಆಡಿ ಅತ್ಯಂತ ಉತ್ಸಾಹದಿಂದ, ಖುಷಿಯಿಂದ  ಕ್ರೀಡೆಗಳಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.

ಧಾರವಾಡದ ವೃತ್ತಿಪರ ಟೇಬಲ್ ಟೆನ್ನಿಸ್ ತರಬೇತುದಾರ  ಎ. ಜೆ. ಸಣ್ಣಕ್ಕಿ ಅವರು ಉದ್ಘಾಟಿಸಿದರು.  ನಂತರ ಮಾತನಾಡಿ, ಟೇಬಲ್ ಟೆನ್ನಿಸ್ ಕ್ರೀಡೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಕ್ರೀಡೆಯಾಗಿದೆ. ಅಲ್ಲದೇ, ವಿದ್ಯಾರ್ಥಿಗಳಲ್ಲಿ ಮಾನಸಿಕ ಕೌಶಲ್ಯ ಅಭಿವೃದ್ದಿಯನ್ನುಂಟು ಮಾಡುತ್ತದೆ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾವಿವಿ   ಕ್ರೀಡಾಧಿಕಾರಿ ಡಾ. ಬಿ. ಹೆಚ್. ವೀರಪ್ಪ ಮಾತನಾಡಿ, ಇತ್ತೀಚಿನ  ಮಕ್ಕಳಲ್ಲಿ ಕ್ರೀಡೆಗಳಲ್ಲಿ ಭಾಗವಹಿ ಸುವ ಮನೋಭಾವ ಕಡಿಮೆಯಾಗಿದೆ, ಮಕ್ಕಳೆಲ್ಲ ಮೊಬೈಲ್ ಗೇಮ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಿಷಾದಿಸಿದರು. 

ಮೊಬೈಲ್‌ ಬಿಟ್ಟು ಮಕ್ಕಳು ಮಣ್ಣಿನಲ್ಲಿ ಆಟ ಆಡುವ ಮನಸ್ಸು ಮಾಡಬೇಕು. ಕ್ರೀಡೆಯಲ್ಲಿ ಟೇಬಲ್ ಟೆನ್ನಿಸ್ ಆಟ, ಎಲ್ಲಾ ಆಟಗಳ ಮೇಲೆ ಪ್ರಭಾವ ಬೀರಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಸ್ಥಾನ ಪಡೆದುಕೊಂಡರೆ ಸರ್ಕಾರಿ ಕೆಲಸ ಸಿಗುತ್ತದೆ. ವಿದ್ಯಾರ್ಥಿಗಳು ಮಣ್ಣಿನಲ್ಲಿ ಮಮತೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲ ಎಂ. ಡಿ. ಅಣ್ಣಯ್ಯ ಮಾತನಾಡಿದರು. ವೇದಿಕೆಯ ಮೇಲೆ ಕಾಲೇಜಿನ‌ ಐಕ್ಯೂಎಸಿ ಘಟಕದ ಸಂಚಾಲಕ ಡಿ. ಅಂಜಿನಪ್ಪ, ಟೇಬಲ್ ಟೆನ್ನಿಸ್ ಕ್ರೀಡೆಯ ಸಂಘಟನಾ ಕಾರ್ಯದರ್ಶಿ ಬಸವರಾಜ ವಿ. ದಮ್ಮಳ್ಳಿ, ತ್ರಿವೇಣಿ, ಉಪಸ್ಥಿತರಿದ್ದರು.  ಕಾಲೇಜಿನ ಬೋಧಕರಾದ ಡಾ ರಾಕೇಶ್ ಬಿ.ಸಿ. ಮೌನೇಶ್ವರ ಟಿ. ಎನ್, ನಾಗರಾಜ ಎನ್, ಸುಮ, ಮಂಜುಳ ಎಂ ಎಸ್.,  ಗಣೇಶ, ಗೀತಾ ಪಾಟೀಲ್ ಬೋಧಕೇತರರಾದ ಷಣ್ಮುಖಪ್ಪ, ಶಾರದಮ್ಮ ಫಕ್ಕೀರಪ್ಪ, ಶಂಭು ಮತ್ತು ಇತರರು ಭಾಗವಹಿಸಿದ್ದರು.  ಹರೀಶ್ ಪ್ರಾರ್ಥಿಸಿದರು. ಎಸ್.ಬಿ.ಮನೋಹರ ಸ್ವಾಗತಿಸಿದರು. ಮೊಹಮ್ಮದ್ ರಿಯಾಜ್‌ ವಂದಿಸಿದರು. ಕಾಡಜ್ಜಿ ಶಿವಪ್ಪ ನಿರೂಪಿಸಿದರು.

error: Content is protected !!