ದಾವಣಗೆರೆ ಬಾಲಕರು, ಬೆಂಗಳೂರು ಉತ್ತರ ಜಿಲ್ಲೆ ಬಾಲಕಿಯರು ಪ್ರಥಮ
ದಾವಣಗೆರೆ, ನ. 12- ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲೆಯ ಬಾಲಕರ ತಂಡ ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡವು.
ಮೈಸೂರು ಜಿಲ್ಲೆಯ ಬಾಲಕರು ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು. ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ ನಿಖಿಲ್, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಮೈಸೂರಿನ ಆಕಾಶ್, ಆಲ್‌ರೌಂಡರ್ ಬಹುಮಾನವನ್ನು ದಾವಣಗೆರೆ ಜಿಲ್ಲೆಯ ಹುಲಿಗೆಪ್ಪ ತನ್ನದಾಗಿಸಿಕೊಂಡರು.
ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಅಟ್ಯಾಕರ್ ಮೈಸೂರಿನ ಪ್ರಕೃತಿ, ಬೆಸ್ಟ್ ಡಿಫೆಂಡರ್ ಬೆಂಗಳೂರು ಉತ್ತರದ ಐಶ್ವರ್ಯ, ಬೆಸ್ಟ್ ಆಲ್‌ರೌಂಡರ್ ಬೆಂಗಳೂರು ಉತ್ತರದ ಮಾನ್ಯ ಪಡೆದರು.
ರಾಜ್ಯ ಪದವಿ ಪೂರ್ವ ಇಲಾಖೆಯ ಗೋಪಾಲ್, ಉಪನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ, ಹೇಮಂತ್, ಡಾ. ಜಯಂತ್ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.
2 ದಿನಗಳ ಕಾಲ ನಡೆದ ಈ ಪಂದ್ಯದಲ್ಲಿ 33 ಜಿಲ್ಲೆಗಳ 66 ತಂಡಗಳ ಕ್ರೀಡಾಪಟುಗಳು, ವ್ಯವಸ್ಥಾಪಕರು, ಸಂಘಟಕರು, ವೀಕ್ಷಕರಾಗಿ ಬೆಂಗಳೂರಿನಿಂದ ರಾಜ್ಯ ಕ್ರೀಡಾ ಇಲಾಖೆಯಿಂದ ಬಸವರಾಜು, ಶಿವಕುಮಾರ್, ಸಂಜೀವಗೌಡ, ರಮೇಶ್, ವಿಶೇಷ ಅತಿಥಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕ ರಾಜು ಆಗಮಿಸಿದ್ದರು.
ಪ್ರದೀಪ್ ಕುಮಾರ್ ಸ್ವಾಗತಿಸಿದರು. ಉಷಾ ವಂದಿಸಿದರು. ಸಂತೋಷ್ ನಿರೂಪಿಸಿದರು.