ಜಗಳೂರು : ದೇಹದ ಕತ್ತಲು ಅಳಿಯಲು ಆರೋಗ್ಯವೇ ಬೆಳಕು

ಜಗಳೂರು : ದೇಹದ ಕತ್ತಲು ಅಳಿಯಲು ಆರೋಗ್ಯವೇ ಬೆಳಕು

ಜಗಳೂರು, ನ.10- ದೀಪಗಳು ಬದುಕಿನ ಕತ್ತಲೆಯನ್ನು ಕರಗಿಸಿದರೆ ಸದೃಢ ಆರೋಗ್ಯವು ಮನಸ್ಸು ಮತ್ತು ದೇಹದ ಕತ್ತಲೆಯನ್ನು ಕರಗಿಸು ತ್ತದೆ ಎಂದು ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ. ಹೇಳಿದರು.

ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ಪ್ರೀತಿ-ಆರೈಕೆ ಟ್ರಸ್ಟ್ ಆಯೋಜಿಸಿದ್ದ 34ನೇ  ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರ ಕಾಲದಿಂದಲೂ ಕನ್ನಡ ನಾಡಿನಲ್ಲಿ ಅನೂಚಾನವಾಗಿ ನಡೆಯುತ್ತಾ ಬಂದಿರುವ ಶಿಕ್ಷಣ ಮತ್ತು ಅನ್ನ ದಾಸೋಹದ ಪರಿಕಲ್ಪನೆಯನ್ನು ಆರೋಗ್ಯಕ್ಕೂ ವಿಸ್ತರಿಸಿದ್ದು ಪ್ರೀತಿ-ಆರೈಕೆ ಟ್ರಸ್ಟ್‌ನ ಹೆಮ್ಮೆ ಮತ್ತು ಸಾರ್ಥಕತೆ ನಮ್ಮದಾಗಿದೆ ಎಂದು ಹೇಳಿದರು.    

ಟ್ರಸ್ಟ್ ಅಧ್ಯಕ್ಷ ಟಿ. ಗುರುಸಿದ್ದನಗೌಡರು ಮಾತನಾಡಿ, ಪ್ರೀತಿ ಆರೈಕೆ ಟ್ರಸ್ಟ್  ಹಲವು ಸಮಾಜ ಪರವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದರು.

ಪಂಚಮಸಾಲಿ ಸಮಾಜದ ಮುಖಂಡ ಎಂ.ಎಸ್. ಪಾಟೀಲ್ ಮಾತನಾಡಿ, ವೈದ್ಯಕೀಯ ಕ್ಷೇತ್ರದವರು ಕೇವಲ ಹಣ ಗಳಿಕೆಯ ಉದ್ದೇಶ ಹೊಂದಿರುತ್ತಾರೆ ಎಂಬ ಮಾತು ಅಸತ್ಯ ಎಂದು ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯ ಚಟುವಟಿಕೆ ನೋಡಿ ಮನದಟ್ಟಾಗುತ್ತಿದೆ ಎಂದು ಶ್ಲ್ಯಾಘಿಸಿದರು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ  ಮಲ್ಲಿಕಾರ್ಜುನ ಬಾಬು, ಬಿಜೆಪಿ ಮುಖಂಡರಾದ ಗೌರಿಪುರ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಮರಿಗುಡ್ಡಪ್ಪ, ಗ್ರಾಪಂ ಸದಸ್ಯರಾದ ವೀರೇಶ್, ಶರಣಪ್ಪ, ನಟರಾಜು, ವಕೀಲರಾದ ಮರೇನಹಳ್ಳಿ  ಬಸವರಾಜ್, ವೈದ್ಯರಾದ ಡಾ. ಶಾಹಿದ್, ರೂಪಾ ಎಚ್.ಕೆ, ಸಿಬ್ಬಂದಿಗಳಾದ ಐಶ್ವರ್ಯ, ಚಿತ್ರಾ, ರಂಜಿತಾ, ದೀಪಾ, ತನು, ಜ್ಯೋತಿ, ಶಿವರಾಮ್, ನಾಗರಾಜ್, ರವಿಕುಮಾರ್, ಕಲ್ಲೇಶ್, ಪ್ರಕಾಶ್, ಮಹೇಂದ್ರ, ವಿಜಯ್, ವಿನೋದ್, ಕಿರಣ್, ರಾಜಾ ಸಾಬ್, ಎಚ್.ಡಿ. ಕುಮಾರ್ ಮುಂತಾದವರು ಇದ್ದರು.

error: Content is protected !!