ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ

ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ  ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ

ದಾವಣಗೆರೆ, ನ. 6- ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. 

ಎವಿಕೆ ಮಹಿಳಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಗೀತಾ ಬಸವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ಭಾಷೆ ನಡೆದು ಬಂದ ಹಾದಿ, ಇತಿಹಾಸ ಮತ್ತು ಭಾಷೆಯ ವೈಭವದ ಬಗ್ಗೆ ತಿಳಿಸಿದರು.

ಡಾ. ದೀಪಾ ಪುರುಷೋತ್ತಮ ಅತಿಥಿ ಗಳನ್ನು ಪರಿಚಯಿಸಿದರು. ವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ, ಕನ್ನಡ ಭಾಷೆ ಕಲಿಕೆಯ ವಿನೂತನ ಶೈಲಿ ಬಗ್ಗೆ ಮಾತನಾಡಿದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್,   ವೈದ್ಯ ವೃತ್ತಿಯಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ  ರೋಗಿಗಳ ಜೊತೆ ಕನ್ನಡ ಭಾಷೆಯ ಸಂವಹನೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. 

ಡಾ. ರೇಣುಕಾ ಬಾರ್ಕಿ ಸ್ವಾಗತಿಸಿದರು. ಕನ್ನಡ ಬಳಗದ ಚಟುವಟಿಕೆಯ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕು. ಕಾವೇರಿ ಮಲ್ಲಿಗವಾಡ ಮತ್ತು ಕು. ಕೆ.ಟಿ. ಸಾತ್ವಿಕ ಒಪ್ಪಿಸಿದರು. ಡಾ. ಕೆ.ಜಿ. ರಘುಕುಮಾರ್ ವಂದಿಸಿದರು.

ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್‌ಕುಮಾರ್ ಅಜ್ಜಪ್ಪ, ವಿದ್ಯಾರ್ಥಿ ಸಂಘದ ಸಮನ್ವಯ ಛೇರ್ಮನ್ ಡಾ. ವಿ.ಎಸ್. ಹರೀಶ್‌ಕುಮಾರ್, ಕನ್ನಡ ಬಳಗದ ಅದಮ್ಯ ಅಧ್ಯಕ್ಷ ಡಾ. ಸಂತೋಷ್ ಭೋಸಲೆ ಮತ್ತು ಇತರರು  ಉಪಸ್ಥಿತರಿದ್ದರು. 

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಮೊನಿಶಾ ತಂಡದಿಂದ ಮಹಿಷಾಸುರ ಮರ್ದಿನಿ ಭರತ ನಾಟ್ಯ ಪ್ರದರ್ಶನ ನಡೆಯಿತು.

error: Content is protected !!