ದಾವಣಗೆರೆ, ನ.10- ಆಲೂರು ಚಂದ್ರ ಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ಮತ್ತು ಆಸ್ಪತ್ರೆ, ಸಕ್ಕರೆ ಕಾಯಿಲೆ ತಪಾಸಣೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ನಾಡಿದ್ದು ದಿನಾಂಕ 12 ರ ಭಾನುವಾರ ವಿಶ್ವ ಮಧುಮೇಹ ಮೇಳ ಕಾರ್ಯಕ್ರವವನ್ನು ಆಸ್ಪತ್ರೆಯ ಆವರಣ ದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಡಾ. ಮಂಜುನಾಥ್ ಆಲೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ಗಂಟೆ ವರೆಗೆ ಮಧುಮೇಹ ಮೇಳ ನಡೆಯ ಲಿದ್ದು, ಮಧುಮೇಹ ತಪಾಸಣೆ, ಆರೋಗ್ಯ ಸಲಹೆ ಹಾಗೂ ತಜ್ಞ ವೈದ್ಯರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಮಧುಮೇಹಿಗಳು ಹಾಗೂ ಮಧುಮೇಹಿಗಳಲ್ಲದವರೂ ಸಹ ಮೇಳದಲ್ಲಿ ಭಾಗವಹಿಸಿ ರೋಗ ನಿಯಂತ್ರಣ ಹಾಗೂ ರೋಗ ಬಾರದಂತೆ ಕೈಗೊಳ್ಳಬಹುದಾದ ಮಾರ್ಗೋ ಪಾಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಳೆದ 39 ವರ್ಷಗಳಿಂದ ಸತತವಾಗಿ ದಿ. ಆಲೂರು ಚಂದ್ರಶೇಖರಪ್ಪ ಹಾಗೂ ದಿ. ಸುನಂ ದಮ್ಮ ಚಂದ್ರಶೇಖರಪ್ಪ ಆಲೂರು ಸ್ಮರಣಾರ್ಥ ವಿಶ್ವ ಮಧುಮೇಹ ಮೇಳ ಕಾರ್ಯಕ್ರಮ ಏರ್ಪಡಿಸುತ್ತಾ ಬರಲಾಗಿದೆ ಎಂದರು.
ಇನ್ನೋರ್ವ ಟ್ರಸ್ಟಿ ಡಾ. ವರುಣಚಂದ್ರ ಮಾತನಾಡಿ, ಮೇಳದ ನಿಮಿತ್ತ ಸಕ್ಕರೆ ಕಾಯಿಲೆವುಳ್ಳ ಮಕ್ಕಳಿಗೆ ಊಟ, ವಸತಿ, ಬಟ್ಟೆ, ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿಗಳನ್ನು ಆಸ್ಪತ್ರೆ ಹಾಗೂ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ. ಸಕ್ಕರೆ ಕಾಯಿಲೆ ಉಳ್ಳವರಿಗಾಗಿ ವಧು-ವರ ಅನ್ವೇಷಣೆ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕಿವಿ-ಗಂಟಲು-ಮೂಗು ತಜ್ಞ ಡಾ.ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿದ್ದರು.