ಮಲೇಬೆನ್ನೂರು : ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಸಹಕಾರ ಸಚಿವ ರಾಜಣ್ಣ

ಮಲೇಬೆನ್ನೂರು : ವಾಲ್ಮೀಕಿ ಜಾತ್ರಾ  ಸಮಿತಿ ಅಧ್ಯಕ್ಷರಾಗಿ ಸಹಕಾರ ಸಚಿವ ರಾಜಣ್ಣ

ಮಲೇಬೆನ್ನೂರು, ನ.9- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ 2024 ರ ಫೆ. 8 ಮತ್ತು 9 ರಂದು ಜರುಗಲಿರುವ 6 ನೇ ವರ್ಷದ  ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರನ್ನು ಗುರುವಾರ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಬೆಂಗಳೂರಿನ ವಿಕಾಸ ಸೌಧದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ, ಸಂಡೂರು ಶಾಸಕ  ಈ ತುಕಾರಾಂ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ್, ಜಗಳೂರು ಶಾಸಕ ಬಿ.ದೇವೇಂದ್ರಪ್ಪ,
ಮಸ್ಕಿ ಶಾಸಕ ಬಸವನಗೌಡ ತುರವಿಹಾಳ್, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ದೇವವರ್ಗ ಶಾಸಕರಾದ ಶ್ರೀಮತಿ ಕರೆಮ್ಮ ಜಿ.ನಾಯಕ ಇವರುಗಳು ಸಭೆಯಲ್ಲಿ ಹಾಜರಿದ್ದು ಜಾತ್ರೆಯ ಯಶಸ್ಸಿಗೆ ಅಗತ್ಯ ಸಲಹೆ ಸಹಕಾರ
ನೀಡಿದರು.

ಶ್ರೀಮಠದ ಧರ್ಮದರ್ಶಿ ಗಳಾದ  ಜಿ. ರಂಗಯ್ಯ, ಹರ್ತಿಕೋಟೆ ವೀರೇಂದ್ರ ಸಿಂಹ, ರಾಮಣ್ಣ ಕಲ್ಲಣ್ಣನವರ್, ಮಾಲೂರು ವೆಂಕಟರಮಣ,
ನಿವೃತ್ತ ಅಧಿಕಾರಿ ಕೆ. ಎಸ್. ಮೃತ್ಯುಂಜಯ, ಮಹಾಸಭಾ ರಾಜ್ಯಾಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ, ಟಿ.ಈಶ್ವರ್, ಹೊದಿಗೆರೆ ರಮೇಶ್, ಕೆ.ಪಿ. ಪಾಲಯ್ಯ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!