ದಾವಣಗೆರೆ, ನ.9- ಪ್ರಯಾಣಿಕರೊಬ್ಬರು ಬಸ್ನಲ್ಲಿ ಬಿಟ್ಟು ಹೋಗಿದ್ದ 20 ಸಾವಿರ ಹಣದ ಜೊತೆ ದಾಖಲಾತಿಗಳು ಇದ್ದ ಬ್ಯಾಗನ್ನು ಮರಳಿ ಕಳೆದುಕೊಂಡವರಿಗೆ ತಲುಪಿಸುವಲ್ಲಿ ಸರ್ಕಾರಿ ಬಸ್ ಚಾಲಕ ಮಹಾಂತೇಶ ಟಿ.ನಾಗರಾಳ ಮತ್ತು ನಿರ್ವಾಹಕ ಶ್ರೀಶೈಲ ಎಂ. ಕೋರಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಯಾಣಿಕ ರೇವಣಸಿದ್ದಯ್ಯ ಎಂಬುವರು ಹರಿಹರದಲ್ಲಿ ಇಳಿಯುವಾಗ ಬ್ಯಾಗ್ ಬಸ್ನಲ್ಲಿಯೇ ಬಿಟ್ಟಿರುತ್ತಾರೆ. ಬಸ್ ಗಜೇಂದ್ರಗಢದಿಂದ ಚಿಕ್ಕಮಗಳೂರಿಗೆ ಹೋಗಬೇಕಾಗಿರುವುದರಿಂದ, ಆ ಬ್ಯಾಗನ್ನು ಮಾರ್ಗ ಮಧ್ಯದ ಹೊನ್ನಾಳಿ ಬಸ್ ಸ್ಟ್ಯಾಂಡ್ ಕಂಟ್ರೋಲರ್ ನಾಗರಾಜ ಎಂಬುವರ ಕಡೆ ಕೊಟ್ಟು ಹೋಗಿರುತ್ತಾರೆ.
ಬ್ಯಾಗ್ನಲ್ಲಿ ಇದ್ದ ಪೋನ್ ನಂಬರ್ಗೆ ಸಂಪರ್ಕಿಸಿದಾಗ, ವಾರಸುದಾರ ರೇವಣಸಿದ್ದಯ್ಯ ಹೊನ್ನಾಳಿ ಪೋಲಿಸ್ ಠಾಣೆಗೆ ಬಂದು ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಮನ್ನೋಳಿ, ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಮತ್ತು ಡಿಪೋ ಮ್ಯಾನೇಜರ್ ಕೆ. ಮಹೇಶ್ವರಪ್ಪ ಮತ್ತು ಕಂಟ್ರೋಲರ್ ನಾಗರಾಜರ ಸಮ್ಮುಖದಲ್ಲಿ ಬ್ಯಾಗನ್ನು ಪಡೆದುಕೊಂಡರು. ಬಸ್ನ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕ ಸೇವೆಯನ್ನು ಪ್ರಶಂಸಿಸಿದರು.