ಧನ್ವಂತರಿ ಜಯಂತಿಯ ಅಂಗವಾಗಿ ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು `ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಜಿಎಎಂಒಎ, ಜಿಲ್ಲಾ ಘಟಕ, ಅಶ್ವಿನಿ ತಪೋವನ ಮತ್ತು ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳು, ಜಿಲ್ಲಾ ಯೋಗ ಒಕ್ಕೂಟ, ಎಎಫ್ಐ ಮತ್ತು ನಿಮಾ ಜಿಲ್ಲಾ ಘಟಕ, ಶ್ರೀ ಧನ್ವಂತರಿ ಆಯುರ್ವೇದ ಔಷಧ ಪ್ರತಿನಿಧಿಗಳ ಸಂಘ, ಆಯುರ್ವೇದ ಔಷಧ ವಿತರಕರು ಮತ್ತು ಮಾರಾಟಗಾರರು ಇವರ ಸಹಯೋಗದಲ್ಲಿ 8ನೇ ರಾಷ್ಟ್ರೀಯ ಆಯು ರ್ವೇದ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಅಧ್ಯಕ್ಷತೆ ವಹಿಸುವರು.
ಜಿ.ಎಂ.ಸಿದ್ದೇಶ್ವರ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಡಿ.ಜಿ. ಶಾಂತನಗೌಡ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಬಿ.ಹೆಚ್. ವಿನಾಯಕ, ಗೀತಾ ದಿಳ್ಳೆಪ್ಪ, ಕೆ.ಅಬ್ದುಲ್ ಜಬ್ಬಾರ್, ಡಾ. ವೆಂಕಟೇಶ್ ಎಂ.ವಿ, ಸುರೇಶ್ ಬಿ. ಇಟ್ನಾಳ್, ಉಮಾ ಪ್ರಶಾಂತ್, ಲೀಲಾವತಿ ಕೆ, ಡಾ. ಅನುರಾಧ ಎಸ್.ಚಂಚಲ್ಕರ್, ಡಾ.ಶಂಕರಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.