ದಾವಣಗೆರೆ, ನ. 9- ನಗರದ ಜೆ.ಹೆಚ್. ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ವತಿಯಿಂದ ನಾಳೆ ದಿನಾಂಕ 10 ರ ಶುಕ್ರ ವಾರ ಬೆಳಿಗ್ಗೆ 10 ಕ್ಕೆ ಜೆ.ಹೆಚ್. ಪಟೇಲ್ ಕ್ಯಾಂಪಸ್ನಲ್ಲಿ ಟೆಕ್ನೋವಾ-2ಕೆ 23, ಕನ್ನಡ ರಾಜ್ಯೋತ್ಸವ, ಕಾಲೇಜು ಘಟಿಕೋತ್ಸವ, ತಾಂತ್ರಿಕ ಉತ್ಸವ ಜರುಗಲಿದೆ ಎಂದು ಪ್ರಾಚಾರ್ಯರಾದ ಜಿ.ಟಿ. ಅಶ್ವಿನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾಸಂಸ್ಥೆ ಅಧ್ಯಕ್ಷೆ ಷಹನಾಜ್ಬೀ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಕನ್ನಡ ಚಳವಳಿ ಕೇಂದ್ರ ಸಮಿತಿ ರಾಜ್ಯ ಉಪಾಧ್ಯಕ್ಷ ಟಿ. ಶಿವಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.
ಈ ವರ್ಷ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಲ್ಲಿ ಪದವಿ ಪ್ರದಾನ ಮಾಡಲಾಗುವುದು. ಅಂತರ ಕಾಲೇಜು ಮಟ್ಟದ ತಾಂತ್ರಿಕ ಉತ್ಸವವನ್ನು ನಡೆಸಲಿದ್ದು, ಉತ್ಸವದಲ್ಲಿ ಬೆಸ್ಟ್ ಟೆಕ್ಕಿ ಅವಾರ್ಡ್, ಬೆಸ್ಟ್ ಪೇಪರ್ ಪ್ರಸೆಂಟೇಶನ್, ಬೆಸ್ಟ್ ಇನ್ನೋವೇಟಿವ್ ಐಡಿಯಾ ಈ ಮೂರೂ ಅವಾರ್ಡ್ ಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮುಸ್ತಾಫಾ, ವಿದ್ಯಾರ್ಥಿಗಳಾದ ಎಂ. ಭುವನ್, ಹೆಚ್. ವೀರೇಶ್ವರ್, ಬಿ.ಕೆ. ಉಲ್ಲಾಸ್,
ಇ. ರಾಧಿಕಾ, ಡಿ.ಪಿ. ಲೇಖನ, ಹೆಚ್.ವಿ. ಹಂಸ ಉಪಸ್ಥಿತರಿದ್ದರು.