ಬಹುಮತ ಕೊರತೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಬಹುಮತ ಕೊರತೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಹೊಸಪೇಟೆ, ನ.8-  ಇಂದು ನಿಗದಿಯಾಗಿದ್ದ ಇಲ್ಲಿನ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌   ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯನ್ನು ಬಹುಮತದ ಕೊರತೆಯಿಂದ ಮುಂದೂಡಲಾಯಿತು.

14 ಜನ ಚುನಾಯಿತ ಪ್ರತಿನಿಧಿಗಳು  ಮತ್ತು ಇಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ, ಒಟ್ಟಾರೆ 16 ಜನ ಸದಸ್ಯರಲ್ಲಿ 9 ಜನ ಸದಸ್ಯರು ಹಾಜರಿರಬೇಕಿತ್ತು.  ಆದರೆ 8 ಜನ ಸದಸ್ಯರು ಮಾತ್ರ ಹಾಜರಿದ್ದು, ಕೋರಂ ಇಲ್ಲದ ಕಾರಣ   ಚುನಾವಣೆಯನ್ನು ಮುಂದೂಡಲಾಯಿತು. 

ಅಧ್ಯಕ್ಷ ಸ್ಥಾನಕ್ಕೆ ಕೆ.ತಿಪ್ಪೇಸ್ವಾಮಿ ಮತ್ತು ಚೊಕ್ಕ ಬಸವನಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಮೂಕಯ್ಯ ಸ್ವಾಮಿ ಮತ್ತು ಐ. ದಾರುಕೇಶ ನಾಮಪತ್ರ ಸಲ್ಲಿಸಿದ್ದರು.

ನಿರ್ದೇಶಕರಾದ ಎಲ್.ಎಸ್.ಆನಂದ, ಪಿ.ಮೂಕಯ್ಯಸ್ವಾಮಿ, ಕೆ.ತಿಪ್ಪೇಸ್ವಾಮಿ, ವೈ.ಅಣ್ಣಪ್ಪ, ನವೀನಕುಮಾರ್ ರೆಡ್ಡಿ, ಸಂದೀಪ್‌ಸಿಂಗ್, ಜೆ.ಎಂ.ಶಿವಪ್ರಸಾದ್ ಮತ್ತು ಪಿ.ವಿಶ್ವನಾಥ್ ಹಾಜರಿದ್ದರು. 

ಚುನಾವಣೆ ನಡೆಸಲು ಬಹುಮತದ ಕೊರತೆಯಿದೆ. ನವೆಂಬರ್ 9ರಂದು ನೋಟಿಸ್ ನೀಡಿ, ಏಳು ದಿನದೊಳಗೆ ಮತ್ತೆ ಚುನಾವಣೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ವಿಶ್ವಜಿತ್ ಮೆಹ್ತಾ ತಿಳಿಸಿದರು.

error: Content is protected !!