ತಾಲ್ಲೂಕು ಕಸಾಪದಿಂದ ದತ್ತಿ ಉಪನ್ಯಾಸ

ತಾಲ್ಲೂಕು ಕಸಾಪದಿಂದ ದತ್ತಿ ಉಪನ್ಯಾಸ

ದಾವಣಗೆರೆ, ನ. 8- ಕನ್ನಡ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ ಸಮೃದ್ಧ ಭಾಷೆ. ಅತ್ಯಂತ ಸುಂದರವಾದ ಲಿಪಿ ಹೊಂದಿರುವ ಭಾಷೆಯೂ ಹೌದು ಎಂಬ ಹೆಮ್ಮೆ ನಮ್ಮದು. 

ಕನ್ನಡ ಕೇವಲ ಮಾತನಾಡುವ ಭಾಷೆಯಾಗದೇ ಇಂದು ಅನ್ನ ಕೊಡುವ ಭಾಷೆಯಾಗಬೇಕಾಗಿದೆ ಎ೦ದು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವೀರಭದ್ರಪ್ಪ ತೆಲಗಿ ತಿಳಿಸಿದರು. 

ಅವರು ಮಾಂಟೆಸೊರಿ ಶಾಲೆಯಲ್ಲಿ ತಾಲ್ಲೂಕು ಕಸಾಪದಿಂದ ನಡೆದ ದತ್ತಿ ಉಪನ್ಯಾಸ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ದತ್ತಿ ಉಪನ್ಯಾಸ ನೀಡಿದರು.

ಮತ್ತೋರ್ವ ಅತಿಥಿ ಕಲೇಸಂನ ಜಿಲ್ಲಾಧ್ಯಕ್ಷರಾದ  ಶ್ರೀಮತಿ ವೀಣಾ ಕೃಷ್ಣಮೂರ್ತಿ ಮಾತನಾಡಿ, ಮಕ್ಕಳು  ಪ್ರತಿನಿತ್ಯ ಶಾಲೆಗೆ ಬರುವಾಗ ತಂದೆ-ತಾಯಿಗಳಿಗೆ ನಮಸ್ಕರಿಸಿ ಬರಬೇಕು ಹಾಗೂ ಗುರು-ಹಿರಿಯರ ಬಗ್ಗೆ ಗೌರವ ತೋರಿ ಅವರ ಮಾರ್ಗದರ್ಶನದಲ್ಲಿ ನಡೆದು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗುವುದಲ್ಲದೇ  ಭಾರತೀಯ ಸಂಸ್ಕೃತಿಯ ಪ್ರವರ್ತಕರಾಗಬೇಕು ಎಂದು ಕಿವಿಮಾತು ಹೇಳಿದರು.

ಆಡಳಿತಾಧಿಕಾರಿ ಶ್ರೀಮತಿ ಎಸ್.ಎಂ. ಮಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀಮತಿ ರಾಬಿಯಾ ಉಪಸ್ಥಿತರಿದ್ದರು. ವಿದ್ಯಾ ರ್ಥಿಗಳಾದ ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ನಮನ್ ವಂದಿಸಿದರು. 

error: Content is protected !!