ದಾವಣಗೆರೆ, ನ. 8- ಜಿಲ್ಲೆಯ ಪಾರಂಪರಿಕ ವೈದ್ಯ ಪರಿಷತ್ತಿನಿಂದ ನಾಡಿದ್ದು ದಿನಾಂಕ 10ರ ಬೆಳಿಗ್ಗೆ 10-30ಕ್ಕೆ ಹದಡಿ ರಸ್ತೆಯಲ್ಲಿರುವ ಕಿಸಾನ್ ವರ್ಲ್ಡ್ ವ್ಯವಹಾರ ಮಳಿಗೆಯ ಒಳಗಿನ ಸೆಮಿನಾರ್ ಹಾಲ್‌ನಲ್ಲಿ (ಹಳೆಯ ವಾಣಿ ರೈಸ್ ಮಿಲ್ ಮುಂಭಾಗದಲ್ಲಿ) ಶ್ರೀ ಧನ್ವಂತರಿ ಜಯಂತಿ ನಡೆಸಲಾಗುವುದು.
ಪೂಜೆಯ ನಂತರ ಧನ್ವಂತರಿ ಜಯಂತಿಯ ಅಂಗವಾಗಿ ಹೆಬ್ಬಾಳಿನ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳವರ ಸಾನ್ನಿಧ್ಯ ದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರ ಎಸ್.ಟಿ.ವೀರೇಶ್, ಚಿತ್ರದುರ್ಗ ಜಿಲ್ಲೆಯ ಪಾರಂಪರಿಕ ವೈದ್ಯ ಪರಿಷತ್ತಿನ ಸಂಚಾಲಕ ವೈದ್ಯ ವೀರಣ್ಣ ಆಗಮಿಸುವರು. ಕರ್ನಾಟಕ ಪಾರಂ ಪರಿಕ ವೈದ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ಬಿ.ಎಂ. ಶಿವಮೂರ್ತಿ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮತಿ ಶಿವಲಿಂಗಮ್ಮ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ರಕ್ತ ಹೀನತೆಗೆ ಉಚಿತ ವಾಗಿ ಔಷಧಿಯನ್ನು ನೀಡಲಾಗುವುದು. ಧನ್ವಂ ತರಿ ಪೂಜೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಪಾರಂಪರಿಕ ವೈದ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯದರ್ಶಿ ಮಮತಾ ನಾಗರಾಜ್ ತಿಳಿಸಿದ್ದಾರೆ.