ದಾವಣಗೆರೆ, ನ. 8- ನಗರದ ಆಂಜನೇಯ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿಯ 25ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಈಚೆಗೆ ನಡೆಯಿತು.
ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಕೆ.ಎಸ್. ಈಶ್ವರಪ್ಪ, ಅಧ್ಯಕ್ಷರಾಗಿ ಶ್ರೀಮತಿ ಕುಸುಮಾ ಲೋಕೇಶ್, ಕಾರ್ಯದರ್ಶಿಯಾಗಿ ಶ್ರೀಮತಿ ಕೆ.ಆರ್. ವಸಂತ, ಗೌರವ ಸಲಹೆ ಗಾರರಾದ ಎಸ್.ಬಿ. ರುದ್ರೇಗೌಡರು ಅಜಗಣ್ಣನವರ್, ಉಪಾಧ್ಯಕ್ಷರಾಗಿ ಕೆ.ಎಂ. ಗುರುಬಸವರಾಜ, ಖಜಾಂಚಿ ಯಾಗಿ ಎಂ.ಹೆಚ್. ರಂಗಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ್‌ಗೌಡ್ರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ನಾಗರಾಜ್, ನಿರ್ದೇಶಕರುಗಳಾಗಿ ಶ್ರೀಕಾಂತಯ್ಯ, ಜಿ.ಬಿ. ಲೋಕೇಶ್, ಛತ್ರಪತಿ, ಕೆ.ಎಂ. ರವೀಂದ್ರನಾಥ್, ಶ್ರೀಮತಿ ಶೀಲಾ, ಶ್ರೀಮತಿ ಸುಜಾತ ರವಿ, ಪ್ರಕಾಶ್, ನವೀನ್ ಕಕ್ಕರಗೊಳ್ಳ, ಜಿ.ಎಸ್. ಶಶಿಧರ, ಶ್ರೀನಿವಾಸ ರೆಡ್ಡಿ, ಎಸ್.ಕೆ. ನಾಗರಾಜ್ ಆಯ್ಕೆಯಾಗಿದ್ದಾರೆ.