ಸಚಿವ ಎಸ್ಸೆಸ್ಸ್ ಅವರಿಂದ ಸ್ಕೌಟ್ಸ್-ಗೈಡ್ಸ್ ಚೀಟಿ ಬಿಡುಗಡೆ

ಸಚಿವ ಎಸ್ಸೆಸ್ಸ್ ಅವರಿಂದ ಸ್ಕೌಟ್ಸ್-ಗೈಡ್ಸ್ ಚೀಟಿ ಬಿಡುಗಡೆ

ದಾವಣಗೆರೆ, ನ. 7 – ಭಾರತ ಸ್ವಾತಂತ್ರ್ಯದ  ಮೊದಲು ಇದ್ದ ಪ್ರಾಂತೀಯ ಸ್ಕೌಟ್ ಸಂಸ್ಥೆಗಳನ್ನು ಒಗ್ಗೂಡಿಸಿ ದಿನಾಂಕ 7/11/1950 ರಂದು ರಾಷ್ಟ್ರ ಮಟ್ಟದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಪ್ರತಿ ವರ್ಷ ಈ ದಿನ ಸಂಸ್ಥಾಪನಾ ದಿನವಾಗಿ ಆಚರಿಸಿ ಧ್ವಜ  ಚೀಟಿಯನ್ನು ಬಿಡುಗಡೆ ಮಾಡುವ ವಾಡಿಕೆ ಇದ್ದು, ಶಾಸಕ  ಶಾಮನೂರು ಶಿವಶಂಕರಪ್ಪ ಮತ್ತು  ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಧ್ವಜ ಚೀಟಿಯನ್ನು ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಎಂ. ಡಾ. ವೆಂಕಟೇಶ್, ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ  ಮುರುಘರಾಜೇಂದ್ರ ಚಿಗಟೇರಿ ಅವರು ಧ್ವಜ ಚೀಟಿಯನ್ನು ಬಿಡುಗಡೆ ಮಾಡಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ. ಪಿ. ಷಡಕ್ಷರಪ್ಪ, ಗೈಡ್ ಆಯುಕ್ತರಾದ ಶಾರದಾ ಮಾಗಾನಹಳ್ಳಿ, ಜಿಲ್ಲಾ ಕಾರ್ಯದರ್ಶಿ  ರತ್ನಾ ಎಂ, ಸಹ ಕಾರ್ಯದರ್ಶಿ  ಸುಖವಾಣಿ, ಜಿಲ್ಲಾ ಸಹಾಯಕ ಆಯುಕ್ತ ಎನ್.ಕೆ. ಕೊಟ್ರೇಶ್ ಮತ್ತು ನೂರುಲ್ಲಾ. ಎ. ಶಿವಪ್ಪ ಭಾಗವಹಿಸಿದ್ದರು.

error: Content is protected !!