ರೈತರ ಹಿತ ಕಾಪಾಡಲು ಕಾಂಗ್ರೆಸ್ ವಿಫಲ: ಕಾಗೇರಿ ಆರೋಪ

ರೈತರ ಹಿತ ಕಾಪಾಡಲು ಕಾಂಗ್ರೆಸ್ ವಿಫಲ: ಕಾಗೇರಿ ಆರೋಪ

ಬೆಳ್ಳೂಡಿಯಲ್ಲಿ ಬರ ಅವಲೋಕಿಸಿದ ಬಿಜೆಪಿ ತಂಡ

ಮಲೇಬೆನ್ನೂರು ನ. 7 – ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ರಾಜ್ಯದ ರೈತರ ಹಿತವನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ವಿಧಾನಸಭೆಯ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಅವರು ಸೋಮವಾರ ಬೆಳ್ಳೂಡಿ ಗ್ರಾಮಕ್ಕೆ ಭೇಟಿ ನೀಡಿ, ಬರ ವೀಕ್ಷಣೆ ಅವಲೋಕಿಸಿದ ನಂತರ ರೈತರೊಂದಿಗೆ ಮಾತನಾಡಿದರು. ಬೆಳೆ ಹಾನಿಗೊಳಗಾದ ರೈತರು ಚಿಂತಿಸದಿರಿ, ನಿಮ್ಮ ಜೊತೆಯಲ್ಲಿ ಬಿಜೆಪಿ ಪಕ್ಷ ಸದಾ ಇರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು.  

ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 40 ಸಾವಿರ ಬರ ಪರಿಹಾರ ನೀಡಬೇಕು. 

ಗ್ಯಾರಂಟಿ ನೀಡುವುದರಲ್ಲಿಯೇ ತಲ್ಲೀನರಾಗಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ. ರೈತರಿಗೆ ಕನಿಷ್ಠ ಏಳು ತಾಸು (ಗಂಟೆ) ನಿರಂತರ ವಿದ್ಯುತ್ ನೀಡುವ ಮೂಲಕ ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಕಾಗೇರಿ ಒತ್ತಾಯಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಎಂಎಲ್‍ಸಿ ಕೆ.ಎಸ್ ನವೀನ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕರಾದ ಪ್ರೊ.ಲಿಂಗಣ್ಣ, ಎಸ್.ವಿ ರಾಮಚಂದ್ರಪ್ಪ, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮುಖಂಡರಾದ ಎಲ್.ಎನ್ ಕಲ್ಲೇಶ್, ಲೋಕಿಕೆರೆ ನಾಗರಾಜ್, ಜಗದೀಶ್, ಕೊಳೇನಹಳ್ಳಿ ಸತೀಶ್, ಧನಂಜಯ ಕಡ್ಲೆಬಾಳು, ಹರಿಹರ ತಾ. ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ಆದಾಪುರ ವೀರೇಶ್, ಕೆ.ಎನ್.ಹಳ್ಳಿ ಮಹಾಂತೇಶ್, ಗ್ರಾಮದ ಗೀತಾ ಬಸವರಾಜ್, ದಾಲ್ ಬಸವರಾಜ್, ಕೆ.ಎನ್. ಪ್ರವೀಣ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

error: Content is protected !!