ದೇವರಬೆಳಕೆರೆ ಶಾಲೆಯ ಸೌಲಭ್ಯಗಳ ಬಳಕೆಗೆ ಚಾಲನೆ

ದೇವರಬೆಳಕೆರೆ ಶಾಲೆಯ ಸೌಲಭ್ಯಗಳ ಬಳಕೆಗೆ ಚಾಲನೆ

ಹರಿಹರ, ನ. 7 – ತಾಲ್ಲೂಕಿನ ದೇವರಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಇಂಡಿಯಾ ಸುಧಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಸಿನ್ಪಾಸಿಸ್ ಇಂಡಿಯಾ ಪ್ರೈ. ಲಿ ಸೇವಾ ಸಂಸ್ಥೆಗಳು ಶಾಲಾ ನಲಿ-ಕಲಿ ಮಕ್ಕಳಿಗೆ ನೀಡಲಾದ ಸೌಲಭ್ಯಗಳ ಹಾಗೂ ಹೊರಾಂಗಣ ಮೈದಾನದಲ್ಲಿ ನಿರ್ಮಿಸಲಾದ ಕ್ರೀಡಾ ಸೌಲಭ್ಯಗಳನ್ನು ಬಳಕೆಗಾಗಿ ಉದ್ಘಾಟಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಈ ಎರಡೂ ಸಂಸ್ಥೆಗಳ ಕಾರ್ಯ ಮೆಚ್ಚಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಲ್ಲಿಸಿರುವ ಇಂತಹ ಕಾರ್ಯಗಳು ಅನುಕರಣೀಯ. ನೀಡಿರುವ ಸೌಲಭ್ಯಗಳನ್ನು ಚೆನ್ನಾಗಿ ಮಕ್ಕಳು ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಬೆಳೆಯಲು ಕರೆ ನೀಡಿದರು.

ಪ್ರಭಾರಿ ತಾ.ಪಂ. ಸಿಇಓ ರಾಮಕೃಷ್ಣಪ್ಪ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ 730 ಕುರ್ಚಿಗಳು, 90 ಟೇಬಲ್‌ಗಳು ಹಾಗೂ 4 ಶಾಲೆಗಳಿಗೆ ಹೊರಾಂಗಣ ಆಟದ ಸಾಮಗ್ರಿ ಗಳನ್ನು ಒದಗಿಸಲಾಗಿರುವ ಈ ಸಂಸ್ಥೆಗಳ ಕಾರ್ಯ ಮೆಚ್ಚುವಂತಹದ್ದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಶಾಲೆಗಳನ್ನು ಆಯ್ಕೆ ಮಾಡಿ, ಸೌಲಭ್ಯ ನೀಡುವಂತೆ ಕೋರಿದರು.

ಮುಖ್ಯ ಅತಿಥಿಗಳಾಗಿ ಇಂಡಿಯಾ ಸುಧಾರ್ ಟ್ರಸ್ಟ್‌ನ ಮುಖ್ಯಸ್ಥ ವಿನೋದ್ ಮುರುಗೋಡ್, ಸಿನ್ಫಾಸಿಸ್ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀಮತಿ ಸಬೀತಾ ಮಹೇಶ್, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಸೀತಮ್ಮ ತಿಪ್ಪೇಶ್, ಎಸ್‌ಡಿಎಂಸಿಯ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀಮತಿ ಮಂಜುಳಾ ಅವರುಗಳು ಉಪಸ್ಥಿತರಿದ್ದರು.

ಇದೇ ವೇಳೆಯಲ್ಲಿ ಮುಖ್ಯ ಶಿಕ್ಷಕ ಆರ್.ಆರ್.ಮಠ ಅವರನ್ನು ಗೌರವಿಸಲಾಯಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಲತಾ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್‌ಕುಮಾರ್ ಹೆಗಡೆ, ಬೀರಪ್ಪ, ಶಾಲಾ ಪ್ರಭಾರಿ ಮುಖ್ಯ ಶಿಕ್ಷ ಬಿದರಿ ಮಂಜುನಾಥ್ ಹಾಜರಿದ್ದರು.

ಶಿಕ್ಷಕ ಶಂಕ್ರಪ್ಪ ಪ್ರಾರ್ಥಿಸಿದರು. ಟಿ.ಎಸ್.ಕುಮಾರಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಆರ್.ಬಿ.ಮಲ್ಲಿಕಾರ್ಜುನ್ ನಿರೂಪಿಸಿದರು. 

error: Content is protected !!