ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಜನಸಂಖ್ಯೆಯ ಶೇ 76.60 ರಷ್ಟು ಮತದಾರರು, ಯುವ ಮತದಾರರನ್ನು ಹೆಚ್ಚು ನೋಂದಾಯಿಸಲು ಮತದಾರರ ಪಟ್ಟಿ ವೀಕ್ಷಕರಾದ ಗುಂಜನ್ ಕೃಷ್ಣ ಸೂಚನೆ

ದಾವಣಗೆರೆ, ನ. 6 –  ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು ಮತದಾರರ ಪಟ್ಟಿಗೆ ಯುವ ಮತದಾರರನ್ನು ಹೆಚ್ಚು ನೋಂದಾಯಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕ ಗುಂಜನ್ ಕೃಷ್ಣ ತಿಳಿಸಿದರು. 

 ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ತಿಳಿಸಿದರು. ಕರಡು ಮತದಾರರ ಪಟ್ಟಿಯನ್ನು ಅ. 27 ರಂದು ಪ್ರಕಟಿಸಲಾಗಿದ್ದು ಆಕ್ಷೇಪಣೆ ಸಲ್ಲಿಸಲು ಡಿ. 9 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ಅಂತಿಮ ಮತದಾರರ ಪಟ್ಟಿಯನ್ನು 2024 ರ ಜ. 5 ರಂದು ಪ್ರಕಟಿಸಲಾಗುತ್ತದೆ.  

 ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2024 ಕ್ಕೆ  ಜಿಲ್ಲೆಯಲ್ಲಿ 947205 ಗಂಡು, 951359 ಹೆಣ್ಣು ಸೇರಿ 1898000 ಜನಸಂಖ್ಯೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಗನುಗುಣವಾಗಿ ಶೇ 76.60 ರಷ್ಟು ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಯನ್ವಯ 726931 ಪುರುಷ, 726887 ಮಹಿಳೆ ಸೇರಿ ಒಟ್ಟು 1453818 ಮತದಾರರಿದ್ದಾರೆ. 

ಯುವ ಮತದಾರರು : ಕರಡು ಪಟ್ಟಿಯನ್ವಯ ಯುವ ಮತದಾರರ ವಿವರದನ್ವಯ 18-19 ವರ್ಷದ 10493 ಪುರುಷ, 8815 ಮಹಿಳೆ, ಇತರೆ 2 ಸೇರಿ 19310 ಯುವ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅವರು ವಿವರ ನೀಡಿದರು. ಈ ವೇಳೆ ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಯುವ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ವೀಕ್ಷಕರಾದ ಗುಂಜನ್ ಕೃಷ್ಣ ತಿಳಿಸಿದರು. 

ಮತಗಟ್ಟೆ ಮಟ್ಟದ ಏಜೆಂಟ್ ನೇಮಿಸಿ : ಎಲ್ಲಾ ಪಕ್ಷದವರು ಮತಗಟ್ಟೆ ಮಟ್ಟದ ಏಜೆಂಟ್‍ಗಳನ್ನು ನೇಮಕ ಮಾಡಿ ಪಟ್ಟಿ ನೀಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಪಕ್ಷಗಳ ಮುಖಂಡರಿಗೆ ತಿಳಿಸಿದರು. 

 ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು. 

error: Content is protected !!