ದಕ್ಷಿಣ ವಲಯ ಈಜು ಕ್ರೀಡಾಕೂಟಕ್ಕೆ ಚಾಲನೆ

ದಕ್ಷಿಣ ವಲಯ ಈಜು ಕ್ರೀಡಾಕೂಟಕ್ಕೆ ಚಾಲನೆ

ದಾವಣಗೆರೆ, ನ. 7 –  ನಗರದ ಹೊರ ವಲಯದಲ್ಲಿರುವ ಬಾಪೂಜಿ ವಿದ್ಯಾ ಸಂಸ್ಥೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆ ಶಿವಗಂಗೋತ್ರಿ ತೋಳಹುಣಸೆಯಲ್ಲಿ ಸಿಬಿಎಸ್‍ಇ ದಕ್ಷಿಣ ವಲಯ ಈಜು ಕ್ರೀಡಾಕೂಟ-2023  ಅದ್ಧೂರಿಯಾಗಿ ಪ್ರಾರಂಭವಾಯಿತು. 

ಶಾಲೆಯ ಸುಸಜ್ಜಿತ ಈಜುಗೋಳದಲ್ಲಿ ಅ. 30ರಿಂದ ನ.  2 ರವರೆಗೆ  ನಡೆಯುವ ಈ ಕ್ರೀಡಾಕೂಟದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಡಿಯು-ಡಮನ್, ನಗರ-ಹವೇಲಿ ಕೇಂದ್ರಾಡಳಿತ ಪ್ರದೇಶಗಳ 11, 14, 17 ಮತ್ತು 19 ವರ್ಷದೊಳಗಿನ ಬಾಲಕ, ಬಾಲಕಿಯರು ಸುಮಾರು 2,500 ಈಜು ಸ್ಪರ್ಧೆಗಳು ಭಾಗವಹಿಸುತ್ತಿದ್ದಾರೆ.  

ಶಾಲೆಯ ಸುಂದರ ಪರಿಸರದ ಮಡಿಲಿನಲ್ಲಿರುವ ಸುಸಜ್ಜಿತ ಈಜುಗೊಳದಲ್ಲಿ ಈಜು ಕ್ರೀಡಾಪಟುಗಳು ಮೀನುಗಳು ಸಹ ನಾಚುವ ಹಾಗೆ ಈಜಿ ಪ್ರೇಕ್ಷಕರನ್ನು  ಕಣ್ಮನ ತಣಿಸುತ್ತಿದ್ದಾರೆ.

 ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಬಿಎಸ್‍ಇ ಮಾಹಿತಿ ತಂತ್ರಜ್ಞಾನದ ಸಹಾಯಕ ಕಾರ್ಯದರ್ಶಿ  ರಾಹುಲ್ ಸಿಂಗ್ ರಾಠೋಡ್ ಅವರು ಕ್ರೀಡಾಪಟುಗಳನ್ನು ಉದ್ದೇಶಿಸಿ, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ತಿಳಿಸಿದರು. 

ಸಂಗೀತ ಶಿಕ್ಷಕ  ಮಂಜುನಾಥ್ ಕೋತ್  ಪ್ರಾರ್ಥನಾ ಗೀತೆಯನ್ನು ಹೇಳಿದರು.  ನೃತ್ಯ ಶಿಕ್ಷಕಿ  ಭಾರ್ಗವಿ ಮತ್ತು ಸೌಂದರ್ಯ ಅವರ  ಮಧುರಾಷ್ಟಕಂ ಭರತನಾಟ್ಯ ಮತ್ತು ವಿದ್ಯಾರ್ಥಿ ಆರ್ಯ ಸಿದ್ದೇಶ್‍  ನೃತ್ಯ ಪ್ರದರ್ಶನ ನೀಡಿದರು.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಸ್ಥ  ಮಂಜುನಾಥ ರಂಗರಾಜು    ಸ್ವಾಗತಿಸಿ, ಈಜು ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿಕ್ಷಕಿಯರಾದ ಯುವರಾಣಿ ಮತ್ತು ಅಕ್ಷತಾ ಅವರು  ಕಾರ್ಯಕ್ರಮ ನಿರೂಪಿಸಿದರು.   ಕ್ರೀಡಾಕೂಟದ ವೀಕ್ಷಕ   ಸಿದ್ದು ಕೆರೆಸೂರು   ಪ್ರಾಂಶುಪಾಲರಾದ  ಜೆ. ಎಸ್. ವನಿತಾ,   ಕಮಲ್ ಬಿ. ಎನ್, ಪ್ರೀತಿ ಸಿಂಗ್,   ಅರುಣ್ ಪ್ರಸಾದ್,   ರಾಜೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!