ರಾಘವೇಂದ್ರ ಶಾಲೆಯಲ್ಲಿ ರಾಜ್ಯೋತ್ಸವ `ಹಳ್ಳಿ ಸೊಗಡು ದೃಶ್ಯಾವಳಿ’ ಕಾರ್ಯಕ್ರಮ

ರಾಘವೇಂದ್ರ ಶಾಲೆಯಲ್ಲಿ ರಾಜ್ಯೋತ್ಸವ  `ಹಳ್ಳಿ ಸೊಗಡು ದೃಶ್ಯಾವಳಿ’ ಕಾರ್ಯಕ್ರಮ

ದಾವಣಗೆರೆ, ನ. 7 – ನಗರದ ರಾಘವೇಂದ್ರ ವಿದ್ಯಾನಿಕೇತನ ಶಾಲೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಗೂ ಆಯ್ದ 5 ಪ್ರಮುಖ ಕನ್ನಡ ಕವಿಗಳ ಗೀತೆಗಳನ್ನು ಹಾಡುವುದರೊಂದಿಗೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕನ್ನಡ ರಾಜ್ಯೋತ್ಸವದ `ಹಳ್ಳಿ ಸೊಗಡು ದೃಶ್ಯಾವಳಿ’ ಯನ್ನು ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಮಂಜುಷಾ ಸೈಮನ್‍ ಉದ್ಘಾಟಿಸಿದರು. ದೃಶ್ಯಾವಳಿಯಲ್ಲಿ ಸಾಂಪ್ರದಾ ಯಿಕ ಕಸುಬುಗಳಾದ ಕುಂಬಾರಿಕೆ, ನೇಕಾರಿಕೆ, ಬಳೆಗಾರ, ಪಶುಸಂಗೋಪನೆ, ನಾಟಿ ವೈದ್ಯ ಪದ್ಧತಿ, ಹಳ್ಳಿ ಸಂತೆ, ಗುರುಕುಲ ಪದ್ಧತಿ, ಬೀಸುವ, ಮಜ್ಜಿಗೆ ಕಡೆಯು ವುದು, ಧಾನ್ಯರಾಶಿ ಮಾಡುವುದು ಸೇರಿದಂತೆ ಇನ್ನೂ ಅನೇಕ ದೃಶ್ಯಾವಳಿಗಳು ನೋಡುಗರ ಮನರಂಜಿಸಿದವು. ದೃಶ್ಯಾವಳಿಯಲ್ಲಿ ಬಳಸಿದ ವಸ್ತುಗಳು ಎಲ್ಲವೂ ಕಸದಿಂದ ರಸ ಎಂಬಂತೆ ಮರುಬಳಕೆಯ ವಸ್ತುಗಳಾಗಿರುವುದು ದೃಶ್ಯಾವಳಿಯಲ್ಲಿ ವಿಶೇಷವಾಗಿತ್ತು. ಇದರ ಜೊತೆಗೆ ಮಕ್ಕಳಿಂದ ಯಕ್ಷಗಾನ, ವೇಷಭೂಷಣ, ಡೊಳ್ಳು ಕುಣಿತ, ಕೋಲಾಟ ಇನ್ನೂ ಮುಂತಾದ ಜಾನಪದ ಕಲಾಮೇಳಗಳಿಂದ ಮೆರವಣಿಗೆ ಮಾಡುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದವು.

ಪ್ರಾಂಶುಪಾಲ ಎಂ.ಎಸ್.ಮಂಜು ನಾಥ್, ಆಡಳಿತಾಧಿಕಾರಿ ಮೃತ್ಯುಂಜಯ ತಿಗಡಿಮಠ್, ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀಮತಿ ಭಾರತಿ ಮುರುಳೀಮಠ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!