ರಾಣೇಬೆನ್ನೂರು, ನ.6- ನಗರದ ಬಿಎಜೆಎಸ್ಎಸ್ ಸಂಸ್ಥೆಯ ಗಾಯತ್ರಿ ಕ್ಯಾಂಪಸ್ನಲ್ಲಿ ಸಂಚಾರಿ ಶ್ರೀ ರಾಮಾಂಜನೇಯ ಸ್ವಾಮಿ ಪೀಠಾಧಿಪತಿ ಶ್ರೀ ದತ್ತಾತ್ರೇಯ ವಾಸುದೇವ ಜಿಯರ್ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳು, ನವೆಂಬರ್ 4 ರಿಂದ 20 ರವರೆಗೆ ಕ್ಯಾಂಪಸ್ನಲ್ಲಿದ್ದು, ಗಾಯತ್ರಿ ದೇವಿಯ ಪಂಚಲೋಹದ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ, 15 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸುವರು ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಆರ್. ಎಂ. ಕುಬೇರಪ್ಪ ಹಾಗೂ ಛೇರ್ಮನ್ ರುದ್ರಪ್ಪ ಲಮಾಣಿ ತಿಳಿಸಿದರು.
January 12, 2025