ಹರಿಹರದಲ್ಲಿನ ಯೋಗ ಸ್ಪರ್ಧೆಗಳ ತರಬೇತಿ ಶಿಬಿರದಲ್ಲಿ ಶಾಸಕ ಬಿ.ಪಿ. ಹರೀಶ್ ಬಣ್ಣನೆ
ಹರಿಹರ, ನ. 6 – ಯೋಗ ಎನ್ನುವುದು ಕೇವಲ ಒಂದು ಕ್ರೀಡೆಯಾಗಲೀ ಅಥವಾ ಪ್ರದರ್ಶನ ಮಾಡು ವಂತಹ ಕ್ರೀಡೆಯಲ್ಲ, ದೇಹವನ್ನು ಸದೃಢ ಆರೋಗ್ಯದ ಕಡೆಗೆ ತೆಗೆದುಕೊಂಡು ಹೋಗವಂತಹ ವಿದ್ಯೆಯಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದ ಸಭಾಂಗಣ ದಲ್ಲಿ, ಕರ್ನಾಟಕ ರಾಜ್ಯ ಅಮೆಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ದಾವಣಗೆರೆಯ ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ನಿಂದ ಏರ್ಪಾಡಾಗಿದ್ದ ರಾಜ್ಯ ಯೋಗ ಸ್ಪರ್ಧಿಗಳ ತರ ಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕಲಿತ ಯೋಗಪಟುಗಳು ಒಬ್ಬ ಪದವಿ ಪಡೆದ ವೈದ್ಯರಿದ್ದಂತೆ ಅವರಲ್ಲಿ ಕಾಣುವ ಎಲ್ಲಾ ಬಗೆಯ ಅಂಶಗಳನ್ನು ಒಬ್ಬ ಯೋಗಪಟುವಿನಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್ ಮಾತನಾಡಿ, ಜಗತ್ತಿನಲ್ಲಿ ಇತ್ತೀಚೆಗೆ ಅತ್ಯಂತ ವೇಗವಾಗಿ ಪ್ರವರ್ತಮಾನಕ್ಕೆ ಬರುತ್ತಿರುವ ಕ್ರೀಡೆಗಳಲ್ಲಿ ಯೋಗಾಸನವು ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಮತ್ತು ವಿಶ್ವದಲ್ಲಿ ಯೋಗಕ್ಕೆ ವಿಶೇಷವಾದ ಸ್ಥಾನಮಾನ ದೊರೆಯುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ದೊರೆಯುತ್ತಿದ್ದು, ಹಾಗಾಗಿ ವೇಗವಾಗಿ ವಿಶ್ವದಾದ್ಯಂತ ಬೆಳೆಯುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಪ್ರಭು, ಖಜಾಂಚಿ ಪಿ.ಆರ್. ಕೃಷ್ಣಮೂರ್ತಿ, ಉಪಾಧ್ಯಕ್ಷ ಬಿ.ಎಂ.ಗಿರೀಶ್, ಜಂಟಿ ಕಾರ್ಯದರ್ಶಿ ಎ.ನಟರಾಜ್, ಎಚ್.ಎಸ್.ಶ್ರೀಧರ ಮೂರ್ತಿ, ಎಸ್.ವೈ.ಎಸ್.ಎ. ಅಧ್ಯಕ್ಷ ಕೆ.ಜೈಮುನಿ, ನಿರ್ದೇಶಕರಾದ ಶೈಲಜಾ ಸೇರಿ ದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.