`ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ’ ಕಾರ್ಯಕ್ರಮದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಮಾಂಟೆಸೊರಿ ಶಾಲಾ ಆವರಣದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಾಂಟೆ ಸೊರಿ ಕಾನ್ವೆಂಟ್ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ನಾಗರಿಕರ ಸಹಾಯವಾಣಿ ಇವರುಗಳ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯುವುದು.
ಅಧ್ಯಕ್ಷತೆಯನ್ನು ಶ್ರೀಮತಿ ಮಲ್ಲಮ್ಮ ವಹಿಸುವರು. `ಮಕ್ಕಳಲ್ಲಿ ಕನ್ನಡ ಭಾಷಾ ಕಲಿಕೆ’ ವಿಷಯ ಕುರಿತು ವೀರಭದ್ರಪ್ಪ ತೆಲಗಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವೀಣಾ ಕೃಷ್ಣಮೂರ್ತಿ, ಅಮಿತ್ ಎಂ.ಎನ್. ಆಗಮಿಸುವರು. ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಅಮೃತಾಪುರ ಶ್ರೀನಿವಾಸರಾವ್ ದತ್ತಿಯನ್ನು ದಾನಿಗಳಾದ ಶ್ರೀಮತಿ ಭಾಗ್ಯಲಕ್ಷ್ಮಿ ಸುಬ್ರಹ್ಮಣ್ಯ ಅಮೃತಾಪುರ (ದಾವಣಗೆರೆ) ಇವರಿಂದ ನಡೆಯುವುದು. ಶ್ರೀಮತಿ ಮಲ್ಲಮ್ಮ ಕೋಂ ಉಜ್ಜಪ್ಪ ಮರಿಕೆಂಚಣ್ಣನವರ ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ ಯಶೋಧ ಕೋಂ. ಎಂ. ಮಹೇಶ್ವರ ದೊಡ್ಡೇರಳ್ಳಿ (ದಾವಣಗೆರೆ) ಇವರಿಂದ ನಡೆಯುವುದು.
ಕಬ್ಬೂರು ಶ್ರೀಮತಿ ಕಲ್ಲಮ್ಮ ಮಂಡ್ಲೂರು ತಿಮ್ಮಪ್ಪ ದತ್ತಿಯನ್ನು ದತ್ತಿ ದಾನಿಗಳಾದ ಎಂ.ಟಿ. ಜಯದೇವಪ್ಪ (ದಾವಣಗೆರೆ) ಇವರಿಂದ ನಡೆಯುವುದು.