ಮೇರು ವ್ಯಕ್ತಿತ್ವದ ನಾಗಮ್ಮ ಕೇಶವಮೂರ್ತಿ

ಮೇರು ವ್ಯಕ್ತಿತ್ವದ ನಾಗಮ್ಮ ಕೇಶವಮೂರ್ತಿ

ವನಿತಾ ಸಮಾಜ ಕಾರ್ಯಕ್ರಮದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಶ್ಲ್ಯಾಘನೆ

ದಾವಣಗೆರೆ, ನ. 6- ಮಾಜಿ ಸಚಿವರೂ, ವನಿತಾ ಸಮಾಜದ ಸಂಸ್ಥಾಪಕರೂ ಆದ ಡಾ. ನಾಗಮ್ಮ ಕೇಶವಮೂರ್ತಿ ಅವರೊಂದು ಸಂಸ್ಥೆ ಇದ್ದಂತೆ, ಮೇರು ವ್ಯಕ್ತಿತ್ವವುಳ್ಳ ಅವರ ಸಮಾಜ ಸೇವಾ ಕಾರ್ಯ ಶ್ಲ್ಯಾಘನೀಯ ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ದಾವಣಗೆೆರೆ  ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಹಾಗೂ `ಜನತಾವಾಣಿ’ ದಿನ ಪತ್ರಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ, 29 ನೇ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ ಹಾಗೂ `ಜಿಲ್ಲಾ ವನಿತಾ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ವನಿತಾ ಸಮಾಜದ ಅಡಿಯಲ್ಲಿ 50ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಾ ಬಂದಿರುವ ನಾಗಮ್ಮ ಕೇಶವಮೂರ್ತಿ ಅವರ ಸೇವೆ ಅನನ್ಯವಾದುದು ಎಂದರು.

ಅವರ ಮಾರ್ಗದರ್ಶನ ಸದಾ ಹೀಗೆ ಇರಲಿ, ವನಿತಾ ಸಮಾಜ ಇನ್ನೂ ಹೆಚ್ಚಿನ ಪ್ರಗತಿಯತ್ತ ದಾಪುಗಾಲು ಇಡಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಸಾಹಿತಿ ಡಾ. ಕೆ. ಶರೀಫಾ ಅವರ ಸಾಹಿತ್ಯ ಸೇವೆ ಪ್ರಶಂಸನೀಯ. ಅವರ ಸಾಧನೆ ಮಹಿಳೆಯರಿಗೆ ಸ್ಫೂರ್ತಿ ಎಂದು ಹೇಳಿದರು.  ಎಸ್.ಎಸ್. ಕೇರ್ ಟ್ರಸ್ಟ್ ಕೂಡ ಮಹಿಳೆಯರ ಸಬಲೀಕರಣದ ಹಿನ್ನೆಲೆಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು. 

error: Content is protected !!