ದಾವಣಗೆರೆ, ನ. 05 – ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕಳೆದ ವಾರ ಜರುಗಿದ 103 ನೇ ಘಟಿಕೋತ್ಸವದಲ್ಲಿ ಕು|| ಜಿ.ಎಸ್.ಬೃಂದಾ ಅವರಿಗೆ ಎಂ.ಎಸ್ಸಿ ಸ್ನಾತಕೋತ್ತರ ಪ್ರಮಾಣ ಪತ್ರದೊಂದಿಗೆ ನಾಲ್ಕು ಚಿನ್ನದ ಪದಕಗಳನ್ನು ವಿತರಿಸಲಾಯಿತು.
ಮಲೇಬೆನ್ನೂರಿನ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಜಿ. ಶಿವಾನಂದಪ್ಪ ಹಾಗೂ ಶ್ರೀಮತಿ ಜಿ.ಓ. ಸುಜಾತ ದಂಪತಿಯ ಕಿರಿಯ ಪುತ್ರಿ ಬೃಂದಾ ಅವರು, ಪ್ರಾಥಮಿಕ ಮತ್ತು ಪ್ರೌಢಶಿ ಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ, ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಭಾಗದಲ್ಲಿ ವ್ಯಾಸಂಗ ಪೂರೈಸಿ, 4 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.