ಸೇವಾ ಹಿರಿತನ ಮರೆತು ಲಾಬಿಗೆ ಪ್ರಶಸ್ತಿ

ಸೇವಾ ಹಿರಿತನ ಮರೆತು ಲಾಬಿಗೆ ಪ್ರಶಸ್ತಿ

ದಾವಣಗೆರೆ, ನ.1-  ವೃತ್ತಿ ರಂಗಭೂಮಿ ಕಲಾವಿದರನ್ನು ಈ ಬಾರಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಯಾವ ಮಾನದಂಡ ಅನುಸರಿಸ ಲಾಗಿದೆ ಎಂದು ಸಂಚಾರಿ ಕೆ.ಬಿ.ಆರ್ ಡ್ರಾಮ ಕಂಪನಿ ಮಾಲೀಕರೂ ಆದ ಹಿರಿಯ ರಂಗ ಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಪ್ರಶ್ನಿಸಿದ್ದಾರೆ.

ಆಯ್ಕೆ ಸಮಿತಿಯಲ್ಲಿ ರಂಗಭೂಮಿಯ ಬಗ್ಗೆ ಸಮಗ್ರ ಮಾಹಿತಿ ಗೊತ್ತಿರುವ ಮಹನೀಯರನ್ನು ನೇಮಿಸಬೇಕಿತ್ತು.  ನಮ್ಮ ಮನೆತನ ವೃತ್ತಿ ರಂಗಭೂಮಿಗಾಗಿ ಜೀವನವನ್ನೇ ಮುಡುಪಿಟ್ಟಿದೆ,  ಸೇವಾ ಹಿರಿತನ ಕಡೆಗಣಿಸಿ ಲಾಬಿ ಮಾಡಿದವರಿಗೆ  ಪ್ರಶಸ್ತಿ ನೀಡಲಾಗಿದೆ.  ಅರ್ಜಿ ಹಾಕಿದವರನ್ನು ಪರಿಗಣಿಸುವುದಿಲ್ಲ ಎಂದ ಸರ್ಕಾರ,  ಸ್ಥಳೀಯ ಮುಖಂಡರುಗಳು ನೆನಪು ಮಾಡಿಕೊಟ್ಟರೂ ಅದನ್ನು ಪರಿಗಣಿಸದೇ ಸೇವಾ ಹಿರಿತನ ಮರೆತಿದೆ. ಇದರಿಂದ ತಮಗೆ ಬಹಳ ನೋವಾಗಿದೆ ಎಂದು ದೂರಿದ್ದಾರೆ. 

ಕೆಲವರಿಗೆ ಲಾಬಿ ಮಾಡಿ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವುದೇ ಕೆಲಸವಾಗಿದೆ. ಇನ್ನೂ ಮುಂದಾದರೂ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವತ್ತ ಸರ್ಕಾರ ಗಮಹಹರಿಸಬೇಕು ಎಂದು ಶಂಭುಲಿಂಗಪ್ಪ ಒತ್ತಾಯಿಸಿದ್ದಾರೆ.

error: Content is protected !!