ಜಿಎಂ ಸೌಹಾರ್ದ ಸಹಕಾರಿ ಮೊಬೈಲ್ ಆಪ್ ಬಿಡುಗಡೆ

ಜಿಎಂ ಸೌಹಾರ್ದ ಸಹಕಾರಿ ಮೊಬೈಲ್ ಆಪ್ ಬಿಡುಗಡೆ

 ದಾವಣಗೆರೆ, ನ.1- ನಗರದ ಜಿಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘವು   ಮೊಬೈಲ್ ಆಪ್ ಬಿಡುಗಡೆ ಮಾಡಿದೆ.  ಇದರ ಮೂಲಕವೇ ಸದಸ್ಯರು ತಮ್ಮ ಖಾತೆಯಲ್ಲಿರುವ ಶಿಲ್ಕು ಹಣ, ಹಿಂದಿನ ವ್ಯವಹಾರ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. 

ನಾವು ವಿಶಾಲ ವ್ಯಾಪ್ತಿಯ ಪ್ರಯೋಜನಗಳನ್ನು ಗುರಿಯಾಗಿಟ್ಟುಕೊಂಡು ನಮ್ಮ ಸಹಕಾರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ   ಎಂದು ಜಿಎಂಐಟಿ ಕಾಲೇಜ್ ಆವರಣದಲ್ಲಿರುವ ಜಿಎಂ ಸೌಹಾರ್ದ ಕಛೇರಿಯಲ್ಲಿ ಆಪ್  ಉದ್ಘಾಟಿಸಿದ ಸಹಕಾರಿಯ  ಅಧ್ಯಕ್ಷ   ಜಿ.ಎಂ. ಪ್ರಸನ್ನಕುಮಾರ್‍ ತಿಳಿಸಿದರು. ಸಹಕಾರಿಯ ಉಪಾಧ್ಯಕ್ಷ  ಎಂ.ಆರ್. ಪ್ರಭುದೇವ್‍, ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಮಲ್ಲಪ್ಪ,     ನಿರ್ದೇಶಕರು, ಸೀನಿಯರ್ ಉಪ ಪ್ರಧಾನ ವ್ಯವಸ್ಥಾಪಕ  ಬಸವರಾಜ್ ಜಿ ಮಾಕಾಳ ಮತ್ತು ಸಹಕಾರಿಯ ಸಲಹೆಗಾರ ಎಸ್.ಸಿ. ಮಹಾರುದ್ರಪ್ಪ ಉಪಸ್ಥಿತರಿದ್ದರು.  

error: Content is protected !!