ಚನ್ನಗಿರಿಯಲ್ಲಿ ಸಂಭ್ರಮದ ರಾಜ್ಯೋತ್ಸವ

ಚನ್ನಗಿರಿಯಲ್ಲಿ ಸಂಭ್ರಮದ ರಾಜ್ಯೋತ್ಸವ

ಚನ್ನಗಿರಿ, ನ. 1- ಇಲ್ಲಿನ ಐಡಿಯಲ್ ಇಂಟರ್ ನ್ಯಾಷನಲ್ ಟೆಕ್ನೋ ಸ್ಕೂಲ್ ವತಿಯಿಂದ `ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರದಿಂದ ಆಚರಿಸಲಾಯಿತು.

 ಕಾರ್ಯಕ್ರಮದ ಪ್ರಯುಕ್ತ ಚನ್ನಗಿರಿಯ ತುಮ್ಕೋಸ್ ಬಳಿಯಿಂದ ಕೆರೆ ಏರಿ ಚೌಡೇಶ್ವರಿ ದೇವಸ್ಥಾನದವರೆಗೆ ಬೃಹತ್ ಜಾಥಾ ಆಯೋಜಿಸಲಾಗಿತ್ತು. 

ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ಹಾಗೂ ತುಮ್ಕೋಸ್ ಅಧ್ಯಕ್ಷ ಆರ್. ಎಂ. ರವಿ  ಜಾಥಾಕ್ಕೆ ಚಾಲನೆ ನೀಡಿದರು.

ಶಾಸಕ ಶಿವಗಂಗಾ ವಿ. ಬಸವರಾಜು, ಕ್ಷೇತ್ರ ಶಿಕ್ಷಣಾ ಧಿಕಾರಿ ಎಲ್. ಜಯಪ್ಪ, ಪೊಲೀಸ್ ವೃತ್ತ ನಿರೀಕ್ಷಕ ನಿರಂಜನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಚನ್ನಗಿರಿಯ ನಿಕಟ ಪೂರ್ವ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ಪಾಲ್ಗೊಂಡಿ ದ್ದರು. ಇದೇ ವೇಳೆ ನೂರು ಅಡಿ ಉದ್ದದ ಕನ್ನಡ ಧ್ವಜದ ಮ್ಯಾರಥಾನ್ ಏರ್ಪಡಿಸಲಾಗಿತ್ತು. ಈ ಮ್ಯಾರಥಾನ್ ಚನ್ನಗಿರಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಗಿದ್ದು ವಿಶೇಷವಾಗಿತ್ತು. ಎಂಟು ಜನ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳು, ವಚನಕಾರರು, ದಾಸರು ಹಾಗೂ ಕೀರ್ತನಾಕಾರರು ಇವರಿಗೆ ಸಂಬಂಧಿಸಿದಂತೆ ಶಾಲೆ ವಿದ್ಯಾರ್ಥಿಗಳು ಛದ್ಮವೇಷದಾರಿಗಳಾಗಿ ಭಾಗವಹಿಸಿದ್ದರು.

ಐಡಿಯಲ್ ಶಿಕ್ಷಣ ಸಂಸ್ಥೆಯ ಎಂ.ಎಸ್.ಸಿದ್ದೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಕಾರ್ಯದರ್ಶಿ ರಘು ಬಿ.ಸಿ., ಖಜಾಂಚಿ ರಾಕೇಶ್ ಹೆಚ್‌.ಬಿ.ಉಪಸ್ಥಿತರಿದ್ದರು.

ಚನ್ನಗಿರಿಯ ಇತಿಹಾಸಕ್ಕೆ ಸಂಬಂಧಿಸಿದ ಕೆಳದಿ ಚೆನ್ನಮ್ಮನ ನಾಟಕ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.

error: Content is protected !!