ದಾವಣಗೆರೆ, ಅ.30- ಮಧ್ಯ ಕರ್ನಾಟಕ ಐರನ್ ಗೇಮ್ಸ್ ಅಸೋಸಿಯೇಷನ್ ಹಾಗೂ ಶ್ರೀ ಸಾಯಿ ಹೈ ಟೆಕ್ ಜಿಮ್ ಸಹಯೋಗದೊಂದಿಗೆ ಪವರ್ ಲಿಫ್ಟಿಂಗ್ ಸ್ಪರ್ಧೆಗಳು ಹಾಗೂ ರಾಷ್ಟ್ರೀಯ ಸ್ಪರ್ಧೆಗಳ ಆಯ್ಕೆ ನಾಳೆ ದಿನಾಂಕ 31ರ ಮಂಗಳವಾರ ಹಾಗೂ ನ.1ರ ಬುಧವಾರ ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಎಸ್. ಸಾಯಿನಾಥ್, ಅರುಣಾ ಟಾಕಿಸ್ ಹಿಂಭಾಗದ ಶ್ರೀ ಸಾಯಿ ಹೈ ಟೆಕ್ ಜಿಮ್ನಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಸಹ ಕಾರ್ಯದರ್ಶಿ ಅಕ್ರಂ ಭಾಷಾ ಮಾತನಾಡಿ, ದಾವಣಗೆರೆ-ಹರಿಹರ ನಗರಾಭಿ ವೃದ್ಧಿ ಪ್ರಾಧಿಕಾರದ ಮುಂಭಾಗ ಇರುವ ಮೇಲ್ಸೇತುವೆಯ ಕೆಳಭಾಗದಲ್ಲಿ ವಿಶಾಲವಾದ ಜಾಗವಿದ್ದು, ಅದನ್ನು ಕ್ರೀಡಾ ವೇದಿಕೆ ಮಾಡಿಕೊಟ್ಟರೆ ಕ್ರೀಡಾಪಟುಗಳಿಗೆ ಅನುಕೂಲವಾ ಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಷಣ್ಮುಖಾಚಾರ್, ಲಕ್ಷ್ಮಿಕಾಂತ್, ಸುಂದರ್ ಖಮಿತ್ಕರ್ ಉಪಸ್ಥಿತರಿದ್ದರು.