ಹರಪನಹಳ್ಳಿ, ಅ.29- ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ಅರಸೀಕೆರೆ ವೈ.ಡಿ.ಅಣ್ಣಪ್ಪ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ನಿಟ್ಟೂರು ವನಜಾಕ್ಷಿ ಆಯ್ಕೆಯಾಗಿದ್ದಾರೆ.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಕರೆದಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಸಮಾಜದ ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ತಿಳಿಸಿದರು. ಸಭೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಎಚ್.ಟಿ.ಗಿರೀಶಪ್ಪ, ಶಿರಹಟ್ಟಿ ದಂಡೆಪ್ಪ, ಮುಖಂಡರಾದ ಎಚ್.ಕೆ.ಹಾಲೇಶ, ಬಸವರಾಜ ಸಂಗಪ್ಪನವರ್, ನಿಟ್ಟೂರು ಸಣ್ಣಹಾಲಪ್ಪ, ಬಾಣದ ಅಂಜಿನಪ್ಪ, ರೋಕ್ಕಪ್ಪ, ಆರ್.ಲೋಕೇಶ, ಪ್ರಾಣೇಶ, ವಾಗೀಶ, ಗಿಡ್ಡಳ್ಳಿ ನಾಗರಾಜ, ಬಾಲೇನಹಳ್ಳಿ ರೇವಣಸಿದ್ದಪ್ಪ, ಕೆಂಚನಗೌಡ, ಮಂಡಕ್ಕಿ ಸುರೇಶ, ವೆಂಕಟೇಶ, ಮಂಜುನಾಥ, ಶಿವರಾಜ, ಯೋಗೇಶ್, ಪ್ರಕಾಶ ಸೇರಿದಂತೆ ಇತರರು ಉಪಸ್ಥಿತರಿದ್ದರು.