ರಾಷ್ಟ್ರಮಟ್ಟದ ಯೋಗಾಸನ ಸ್ಫರ್ಧೆ

ರಾಷ್ಟ್ರಮಟ್ಟದ ಯೋಗಾಸನ ಸ್ಫರ್ಧೆ

ಜಿಎಂಐಟಿ ವಿದ್ಯಾರ್ಥಿನಿಗೆ ನಾಲ್ಕನೇ ಸ್ಥಾನ

ದಾವಣಗೆರೆ, ಅ. 29- ಸಪ್ತರ್ಷಿ ಯೋಗಧರ ಸ್ಫೋರ್ಟ್ಸ್ ಅಕಾಡೆಮಿ  ಈಚೆಗೆ ನಗರದ ಶಿವ ಪಾರ್ವತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ `ಯೋಗಾಸನ’ ಸ್ಫರ್ಧೆಯಲ್ಲಿ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಎ ಐ ಎಂ ಎಲ್ ವಿಭಾಗದ  ವಿದ್ಯಾರ್ಥಿನಿ ಸೋನಿಯಾ ಶೇಟ್ ಅವರು ನಾಲ್ಕನೇ ಸ್ಥಾನ ಪಡೆದಿರುತ್ತಾರೆ ಹಾಗೂ ವಿಯೆಟ್ನಾಂನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 

ಈ ಕ್ರೀಡಾಪಟುವಿಗೆ ಕಾಲೇಜಿನ ನಿರ್ವಹಣಾ ಪ್ರತಿನಿಧಿ ವೈ.ಯು. ಸುಭಾಶ್ಚಂದ್ರ, ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ, ಎ ಐ ಎಂ ಎಲ್ ವಿಭಾಗದ ಮುಖ್ಯಸ್ಥ ಜಿ. ಕೀರ್ತಿಪ್ರಸಾದ್ ಹಾಗೂ ಕ್ರೀಡಾ ಸಂಯೋಜಕ ಡಾ. ಹೆಚ್.ಎಸ್. ಕಿರಣ್‍ಕುಮಾರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ ಮತ್ತು ವೈ. ಹನುಮಂತಪ್ಪ, ಯೋಗ ತರಬೇತುದಾರ ಸಿ.ಎಂ. ಪ್ರದೀಪ್ ಕುಮಾರ್ ಅಭಿನಂದಿಸಿದ್ದಾರೆ.

error: Content is protected !!