ನಗರದಲ್ಲಿ ಇಂದಿನಿಂದ ಚಿತ್ರಕಲಾವಿದ ಸೋಮಶೇಖರ ಸಾಲಿ ಚಿತ್ರಕಲಾ ಪ್ರದರ್ಶನ

ದಾವಣಗೆರೆ, ಅ. 29- ವಿಜಯಪುರದ ಸೋಮಶೇಖರ ಸಾಲಿ ಪ್ರತಿಷ್ಠಾನದ ವತಿಯಿಂದ ಹಿರಿಯ ಚಿತ್ರಕಲಾವಿದ ಸೋಮಶೇಖರ ಸಾಲಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ನಾಳೆ ದಿನಾಂಕ 30 ರಿಂದ ನವೆಂಬರ್ 1 ರವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ಕಲಾ ಗ್ಯಾಲರಿಯಲ್ಲಿ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಚಿತ್ರಕಲಾವಿದ ದತ್ತಾತ್ರೇಯ ಎನ್. ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಡಿನ ಹಿರಿಯ ಚಿತ್ರಕಲಾವಿದ ಸೋಮಶೇಖರ ಸಾಲಿ ಅವರು ಭಾರತೀಯ ಸಾಂಪ್ರದಾಯಿಕ ಶೈಲಿಯ ಚಿತ್ರಕಲಾವಿದರಾಗಿದ್ದು, ಬಹುಮುಖ ಕಲಾವಿದರು. ಇವರ ಜನ್ಮ ಶತಮಾನೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಏರ್ಪಾಡಾಗಿದೆ ಎಂದರು.

ದಿನಾಂಕ 30 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ದೃಶ್ಯ ಕಲಾ ಗ್ಯಾಲರಿಯಲ್ಲಿ ದಾವಣಗೆರೆ ವಿವಿ
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾ ವಿಮರ್ಶನ ಡಾ.ಡಿ.ಎ. ಉಪಾಧ್ಯ. ಉಮಾಪತಿ ಶರ್ಮಾ, ಡಾ. ಜೈರಾಜ್ ಎಂ. ಚಿಕ್ಕಪಾಟೀಲ್ ಭಾಗವಹಿಸಲಿದ್ದು, ಕಲಾವಿದ ಪಿ.ಎಸ್. ಕಡೇಮನಿ
ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಕುಲಕರ್ಣಿ, ಹರೀಶ್ ಹೆಡ್ಡನವರ್, ಶಿವಶಂಕರ್
ಸುತಾರ್ ಇದ್ದರು. 

error: Content is protected !!