ಹರಿಹರ, ಅ, 29 – ನಗರದ ಹೊಸ ಭರಂಪುರ ಬಡಾವಣೆ ಗ್ರಾಮದೇವತೆ ಭರಂಪುರ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ್ದ ಹರಿಹರ ಕಾ ರಾಜಾ ಗಣೇಶ ಮೂರ್ತಿಯನ್ನು ಸಡಗರ – ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.
ನಗರದ ಗ್ರಾಮದೇವತೆ ದೇವಸ್ಥಾನದ ಆವರಣದಿಂದ ಆರಂಭ ಗೊಂಡ ಗಣಪತಿ ವಿಸರ್ಜನೆ ಮೆರವಣಿಗೆಯು ರಾಜ ಬೀದಿಗಳಲ್ಲಿ ಸಂಚರಿಸಿ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಉಡುಪಿ ಹುಲಿ ವೇಷ, ಡ್ರಮ್ ಸೆಟ್, ನಂದಿಕೋಲು, ಸಮಾಳ, ಡಿಜೆ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರವಣಿಗೆಗೆ ಮೆರಗು ನೀಡಿದವು. ಪಿಎಸ್ಐ ಚಿದಾನಂದ ಪೊಲೀಸ್ ಸಿಬ್ಬಂದಿಗಳಾದ ಸತೀಶ್, ಮಂಜುನಾಥ್ ಬನ್ನಿಕೋಡು, ರವಿನಾಯ್ಕ್, ಇತರರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಭರಂಪುರ ಯುವಕ ಸಂಘದ ಅಧ್ಯಕ್ಷ ಸುರೇಶ್ ಚಂದಪೂರ್, ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ಗ್ರಾಮದೇವತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಪೂಜಾರ್ ಈರಣ್ಣ, ಕಾರ್ಯದರ್ಶಿ ಕೆ.ಬಿ. ರಾಜಶೇಖರ, ಉಪಾಧ್ಯಕ್ಷ ಬೆಣ್ಣೆ ರೇವಣಸಿದ್ದಪ್ಪ, ಸಹ ಕಾರ್ಯದರ್ಶಿ ಗುತ್ಯಪ್ಪ ನಿರ್ದೇಶಕ ಎಂ.ಚಿದಾನಂದ ಕಂಚಿಕೇರಿ, ಪರಮೇಶ್ವರಪ್ಪ ನಿಲಗುಂದ, ಹಣಿಗಿ ಸುರೇಶ್ ಮಜ್ಜಿಗೆ ಚಂದ್ರಪ್ಪ ಸೇರಿದಂತೆ ಇತರರು ಹಾಜರಿದ್ದರು.