ಮಲೇಬೆನ್ನೂರು, ಅ. 29 – ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಹಾಗೂ ಮರಿ ಬನ್ನಿ ಅಂಗವಾಗಿ ದೊಡ್ಡ ಎಡೆ ಜಾತ್ರೆ ಭಾನುವಾರ ಸಂಭ್ರಮದಿಂದ ಜರುಗಿತು.
ದೇವಸ್ಥಾನದಲ್ಲಿ ಬೆಳಿಗ್ಗೆ ಜವಳ, ಬಾಯಿ ಬೀಗ, ಹರಕೆ ಸಲ್ಲಿಸುವ ಕಾರ್ಯಕ್ರಮಗಳು ನಡೆದವು. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರಿಗೆ ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಮಠದ ರೇವಣಸಿದ್ದಯ್ಯನವರು ಆಶೀರ್ವದಿಸಿದರು.
ನಂತರ ಪೂಜಾರಪ್ಪರಿಂದ ದೊಡ್ಡ ಎಡೆ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಹರಿಹರ ತಾ. ಗ್ರಾಮಾಂ ತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್‌ಅಲಿ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರು ವಿರೂಪಾ ಕ್ಷಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ದೇವ ಸ್ಥಾನ ಸಮಿತಿ ಅಧ್ಯಕ್ಷ ಪೂಜಾರ ನಾಗಪ್ಪ, ಗೌರವಾಧ್ಯಕ್ಷ ಪೂಜಾರ್ ರೇವಣಪ್ಪ, ಕಾರ್ಯದರ್ಶಿ ಕೆ.ಪಿ.ಗಂಗಾಧರ್, ತಾ. ಕುರುಬ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಬೀರಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಪೂಜಾರ್ ಬಸಪ್ಪ, ಪಿ.ಬಿ. ಬೀರಪ್ಪ, ಜನತಾಬಜಾರ್ ನಿರ್ದೇಶಕ ಪಿ.ಹೆಚ್. ಶಿವಕುಮಾರ್, ಪುರಸಭೆ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಗಂಗಾಧರ್ ಪುರಸಭೆ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಗಂಗಾಧರ್, ಶ್ರೀಮತಿ ಸುಧಾ ಪಿ.ಆರ್. ರಾಜು, ಬಿ.ಮಂಜುನಾಥ್, ಶ್ರೀಮತಿ ಅಕ್ಕಮ್ಮ ಬಿ.ಸುರೇಶ್, ಭೋವಿ ಶಿವು, ಭೋವಿ ಕುಮಾರ್ ಎಳೆಹೊಳೆ ಕುಮಾರ್, ಡಿ.ಕೆ. ಸಿದ್ದನಗೌಡ ಪೂಜಾರ್, ಮಲ್ಲಿಕಾರ್ಜುನ್, ಪಿ.ಆರ್. ಕುಮಾರ್ ಹೆಚ್.ಡಿ. ಬೀರಪ್ಪ, ಎ.ಕೆ. ಲೊಕೇಶ್, ಎ.ಕೆ. ನಾಗರಾಜ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.