ಮಲೇಬೆನ್ನೂರು, ಅ.27- ಜಿಗಳಿ ಗ್ರಾ.ಪಂ. ಕಛೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ 246ನೇ ಜಯಂತಿಯನ್ನು ಆಚರಿಸಲಾಯಿತು.
ಶಾಲೆಯಲ್ಲಿ ಜರುಗಿದ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕ ಗುಡ್ಡಪ್ಪ ಅವರು ಕಿತ್ತೂರು ರಾಣಿ ಚೆನ್ನಮ್ಮನ ಹುಟ್ಟು ಹಾಗೂ ಹೋರಾಟದ ಬಗ್ಗೆ ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಜಿ. ಬೇವಿನಹಳ್ಳಿಯ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಎಕ್ಕೆಗೊಂದಿ ಚೇತನ್, ಗ್ರಾ.ಪಂ. ಸದಸ್ಯರಾದ ಡಿ.ಎಂ. ಹರೀಶ್, ಆನಂದಗೌಡ, ಕೆ.ಜಿ. ಬಸವರಾಜ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ. ದೇವೇಂದ್ರಪ್ಪ, ಎಂ.ವಿ. ನಾಗರಾಜ್, ಎಸ್ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್, ಪಂಚಮಸಾಲಿ ಸಮಾಜದ ಮುಖಂಡರಾದ ಮುದ್ದಪ್ಳ ಶಿವಶಂಕರ್, ಎಂ.ಬಿ. ಜಗದೀಶ್, ಮುದ್ದಪ್ಳ ವಾಗೀಶ್, ಬನ್ನಿಕೋಡು ಪ್ರಕಾಶ್, ಗುರುರಾಜ್, ಮುದ್ದಪ್ಳ ನಾಗರಾಜ್, ಮಲ್ಲನಗೌಡ, ಕೆ.ಎನ್. ಬಸವರಾಜಪ್ಪ, ಬೆಣ್ಣೇರ ನಂದ್ಯಪ್ಪ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಜಿ.ಪಿ. ಹನುಮಗೌಡ, ಪತ್ರಕರ್ತ ಪ್ರಕಾಶ್, ಪಿಡಿಓ ಉಮೇಶ್, ಶಾಲಾ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕ ಶ್ರೀನಿವಾಸ್ ರೆಡ್ಡಿ, ಎಸ್ಡಿಎಂಸಿಯ ವಿಜಯ ಭಾಸ್ಕರ್, ಡಿ.ಪಿ.ಚಿದಾನಂದ್, ಗಂಗಾಧರಚಾರಿ, ಗ್ರಾ.ಪಂ. ಸಿಬ್ಬಂದಿಗಳಾದ ಮೌನೇಶ್, ಪ್ರಕಾಶ್, ಮುತ್ತು, ಬಸವರಾಜಯ್ಯ, ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.