ದಾವಣಗೆರೆ, ಅ.27- ಮೈಸೂರು ದಸರಾ ಹಬ್ಬದ ಪ್ರಯುಕ್ತ ದಸರಾ ಹಬ್ಬದ ಸಂಘಟನೆಯಿಂದ ಕರ್ನಾಟಕ ಆರ್ಮ್ ರೆಸ್ಲಿಂಗ್ (ಪಂಜ ಕುಸ್ತಿ) ಸಂಸ್ಥೆಯ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಓಪನ್ ಆರ್ಮ್ ರೆಸ್ಲಿಂಗ್ ಸ್ಪರ್ಧೆಯಲ್ಲಿ ಹರಿಹರ ಬ್ರದರ್ ಜಿಮ್ಗೆ ಮೈಸೂರು ದಸರಾ ಆರ್ಮ್ ರೆಸ್ಲಿಂಗ್ ರಾಜ್ಯ ಮಟ್ಟದ ಸಮಗ್ರ ತಂಡ ಪ್ರಶಸ್ತಿ ಲಭಿಸಿದೆ.
ರಾಜ್ಯದಿಂದ ಸುಮಾರು 231 ಜನ ಪುರುಷರು, ಮಹಿಳೆಯರು, ಅಂಗವಿಕಲ ಕ್ರೀಡಾಪಟುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಇದರಲ್ಲಿ ಹರಿಹರ ಬ್ರದರ್ ಜಿಮ್ ವತಿಯಿಂದ 20 ಜನ ಪುರುಷ, ಮಹಿಳಾ ಹಾಗು ಅಂಗವಿಕಲ ಕ್ರೀಡಾಪಟುಗಳು ಭಾಗವಹಿಸಿ 4 ಚಿನ್ನ, 5 ಬೆಳ್ಳಿ, ಹಾಗು 2 ಕಂಚಿನ ಪದಕಗಳನ್ನು ಗೆಲ್ಲುವುದರೊಂದಿಗೆ ಮೈಸೂರು ದಸರಾ ರಾಜ್ಯ ಮಟ್ಟದ ಸಮಗ್ರ ತಂಡ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯವರು ಗೆದ್ದುಕೊಂಡಿದ್ದಾರೆ.