ಶತಕೋಟಿ ರಾಮ ತಾರಕ ಜಪ ಯಜ್ಞಕ್ಕೆ ಚಾಲನೆ

ಶತಕೋಟಿ ರಾಮ ತಾರಕ ಜಪ ಯಜ್ಞಕ್ಕೆ ಚಾಲನೆ

ದಾವಣಗೆರೆ, ಅ. 26 – ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯದಾ ದ್ಯಂತ ಶತಕೋಟಿ ರಾಮ ತಾರಕ ಜಪ ಯಜ್ಞ ವಿಜಯದಶಮಿಯ ದಿನದಂದು ಪ್ರಾರಂಭ ಗೊಂಡಿದ್ದು, ಅದೇ ರೀತಿ ನಗರದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ವೇದಬ್ರಹ್ಮ ಶ್ರೀ ಶಂಕರನಾ ರಾಯಣ ಶಾಸ್ತ್ರಿಗಳವರ ಸಮ್ಮುಖದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ  ಅಧ್ಯಕ್ಷರಾದ ಡಾ. ಬಿ.ಟಿ. ಅಚ್ಚುತ್‌ ಅವರು ಶತಕೋಟಿ ರಾಮ ತಾರಕ ಜಪ ಯಜ್ಞಕ್ಕೆ ಅಧಿಕೃತವಾಗಿ ಚಾಲನೆ  ನೀಡಿದರು. 

ಈ ಸಂದರ್ಭದಲ್ಲಿ ಶಂಕರ ಸೇವಾ ಸಂಘದ ಕಾರ್ಯದರ್ಶಿ ಶ್ರೀನಿವಾಸ ಜೋಶಿ, ಉಪಾಧ್ಯಕ್ಷರಾದ ಮೋತಿ ಸುಬ್ರಮಣ್ಯ, ವಿನಾಯಕ ಜೋಶಿ, ಎಸ್.ಪಿ. ಸತ್ಯನಾರಾಯಣ ರಾವ್, ಬಾಲಕೃಷ್ಣ ವೈದ್ಯ  ಡಾ. ಎಸ್. ಎನ್. ರಮೇಶ್, ಅನಿಲ್ ಬಾರಂಗೆಳ್‌,  ರಮೇಶ್ ಪಾಟೀಲ್, ಡಿ.ಶೇಷಾಚಲ ಹಾಜರಿದ್ದರು.

ದಾವಣಗೆರೆ ಜಿಲ್ಲೆಯಾದ್ಯಂತ ಶತಕೋಟಿ ರಾಮ ತಾರಕ ಜಪವು ನಡೆಯಲಿದ್ದು ಪ್ರತಿದಿನ ತಾವು ಮಾಡಿದ ಜಪ ಸಂಖ್ಯೆಯನ್ನು ಬರೆದಿಟ್ಟು ಕೊಂಡು ನಾವು ತಿಳಿಸಿದ ದಿನಾಂಕದಂದು ತಾವು ಮಾಡಿದ ಒಟ್ಟು ಜಪ ಸಂಖ್ಯೆಯನ್ನು ಕೊಡಬೇಕು. ಅಯೋಧ್ಯೆಯಲ್ಲಿ 24ನೇ ಜನವರಿ 2024 ರಂದು ನಡೆಯಲಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆ ಕಾರ್ಯ ಕ್ರಮಕ್ಕೆ ಈ ಜಪ ಸಂಖ್ಯೆಯನ್ನು ಕಳಿಸಿಕೊಡ ಲಾಗುವುದು. ಯಾವುದೇ ಜಾತಿ ಧರ್ಮ ಭೇದ ವಿಲ್ಲದೆ ಎಲ್ಲರೂ ಸಹ ಈ ರಾಮ ತಾರಕ ಜಪ ಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

error: Content is protected !!