ಮಲೇಬೆನ್ನೂರು, ಅ.25- ಜಿಗಳಿ ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ಬುಧವಾರ ಸಂಜೆ ಶ್ರೀ ರಂಗನಾಥ ಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಜಿ.ಬೇವಿನಹಳ್ಳಿ : ವಿಯದಶಮಿ ಪ್ರಯುಕ್ತ ಜಿ.ಬೇವಿನಹಳ್ಳಿ ಗ್ರಾಮದಲ್ಲೂ ಬುಧವಾರ ಶ್ರೀ ಆಂಜನೇಯ ಸ್ವಾಮಿಯೊಂದಿಗೆ ಜಿಗಳಿಯ ಶ್ರೀ ರಂಗನಾಥ ಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ದೇವರ ಉತ್ಸವ ನಡೆಯಿತು. ಈ ವೇಳೆ ಮಹಿಳೆಯರು ಹೂವಿನಿಂದ ತಯಾರು ಮಾಡಿದ ಆರತಿಯನ್ನು ದೇವರುಗಳಿಗೆ ಬೆಳಗಿದರು.