ಮಾದನಬಾವಿಯಲ್ಲಿ ಇಂದಿನಿಂದ ಮೂರು ದಿನ ರಾಜ್ಯಮಟ್ಟದ ಕೃಷಿ ಮೇಳ

ಮಾದನಬಾವಿಯಲ್ಲಿ ಇಂದಿನಿಂದ ಮೂರು ದಿನ ರಾಜ್ಯಮಟ್ಟದ ಕೃಷಿ ಮೇಳ

ಹೊನ್ನಾಳಿ, ಅ. 24 – ಪ್ರಕೃತಿ ವೈಫಲ್ಯದ ಸಮನ್ವಯ ಸಾಂಗತ್ಯ ಎಂಬ ಶೀರ್ಷಿಕೆಯಡಿ ರಾಜ್ಯಮಟ್ಟದ ಕೃಷಿ ಮೇಳವನ್ನು ನಾಳೆ ದಿನಾಂಕ 25ರಿಂದ ಮೂರು ದಿನ ನ್ಯಾಮತಿ ತಾಲ್ಲೂಕಿನ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿ 18 ಹಳ್ಳಿ ಕಟ್ಟೆಮನೆ ದೊಡ್ಡಕಲ್ಲುಕಟ್ಟೆ ಮಾದನಬಾವಿ ಗ್ರಾಮಸ್ಥರಿಂದ ಆಯೋಜಿಸ ಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಕರಿಬಸಪ್ಪ ತಿಳಿಸಿದ್ದಾರೆ.

ಬರಗಾಲಕ್ಕೆ ಸಂಬಂಧಿಸಿದ ಮಾಹಿತಿ ಯನ್ನು ರಾಜ್ಯದ ಗಣ್ಯರು, ಕೃಷಿ ಕ್ಷೇತ್ರದ ಸಾಧ ಕರು, ವಿಜ್ಞಾನಿಗಳಿಂದ ರೈತ ಸಮುದಾಯಕ್ಕೆ ಮಾಹಿತಿಯನ್ನು ತಿಳಿಸುವ ಸಲುವಾಗಿ ರಾಜ್ಯ ದಲ್ಲಿಯೇ ಪ್ರಥಮ ಬಾರಿಗೆ ಈ ಕೃಷಿ ಮೇಳ ವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಇರುವಕ್ಕಿ ಬಳಿ ಇರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ್, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹಾಗೂ ಇತರರು ಆಗಮಿಸಲಿದ್ದಾರೆ. 

ಮಧ್ಯಾಹ್ನ 1 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸೌರಭ ಗೋಷ್ಠಿ ನಡೆಯಲಿದೆ. ಈ ಕಾರ್ಯ ಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಹಾಸನ ಮಾಜಿ ಶಾಸಕ ಪ್ರೀತಂಗೌಡ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ ಭಾಗವಹಿಸಲಿದ್ದಾರೆ.

ಬೀಜಗಳ ಸಂರಕ್ಷಣೆ ಹಾಗೂ ಬೀಜೋಪ ಚಾರ, ರೇಷ್ಮೆ ಕೃಷಿಯಲ್ಲಿ ಆಧುನಿಕ ಸಂರಕ್ಷಣೆ, ತರಕಾರಿ ಸಸಿಗಳ ಸಂರಕ್ಷಣೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಉಪನ್ಯಾಸಗಳು ನಡೆಯಲಿವೆ.

ದಿನಾಂಕ 26ರ ಗುರುವಾರ ಆರುಂಡಿ ಕೆ. ಮಂಜಪ್ಪ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ, ಬೆಳಿಗ್ಗೆ 10.30ಕ್ಕೆ ರೈತಪರ ಗೋಷ್ಠಿಗಳು ನಡೆಯಲಿವೆ. ಈ ಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅರಸಿಕೆರೆ ಶಾಸಕ ಶಿವಲಿಂಗೇಗೌಡ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದ ಪೂರ್ಯಾನಾಯ್ಕ್, ಹರಿಹರ ಶಾಸಕ ಬಿ.ಪಿ. ಹರೀಶ್, ಪಿ.ಐ. ಸಿದ್ದೇಗೌಡ ಹಾಗೂ ಇತರರು ಉಪಸ್ಥಿತರಿರುತ್ತಾರೆ. ಅಡಿಕೆ, ತೆಂಗು ಬೆಳೆಗಳ ಅಂತರ ಬೆಳೆ ಪದ್ದತಿ, ಕಳೆನಾಶಕ ಭೂಮಿಯ ಫಲವತ್ತತೆ, ಪುಷ್ಪ ಕೃಷಿ ಹಾಗೂ ಹಣ್ಣು ಕೃಷಿ ಬೇಸಾಯ, ತುಂತುರು ನೀರಾವರಿ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಉಪನ್ಯಾಸಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ದಿನಾಂಕ 27 ರಂದು ಬೆಳಗ್ಗೆ 10 ಕ್ಕೆ ವೀರಭದ್ರೇಶ್ವರ ಭಜನಾ ಸಂಘ ಮಾದನಬಾವಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ, ಅಂದು ಜಾನುವಾರುಗಳ ರೋಗಬಾಧೆ ಮತ್ತು ನಿವಾರಣೆ, ಆಧುನಿಕ ಹಸುಗಳ ಸಾಕಾಣಿಕೆಯಲ್ಲಿ ಪೋಷಕಾಂಶಗಳು ಮತ್ತು ಮೇವಿನ ಸಂಸ್ಕರಣೆ ಬಗ್ಗೆ ಉಪನ್ಯಾಸ ನಡೆಯಲಿದೆ ಮತ್ತು ಮಧ್ಯಾಹ್ನ 1 ಗಂಟೆಗೆ ಜಾನಪದ ಗಾಯಕ ಎಚ್. ಕಡದಕಟ್ಟೆ ತಿಮ್ಮಪ್ಪ ಮತ್ತು ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ 2 ಕ್ಕೆ ಗೋಷ್ಠಿ ಹಮ್ಮಿಕೊಳ್ಳಲಾಗಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ.ಜಿ. ಶಾಂತನಗೌಡ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಮಧುಬಂಗಾರಪ್ಪ, ಕಡೂರು ಶಾಸಕ ಆನಂದ್, ಜಗಳೂರು ಶಾಸಕ ದೇವೇಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್. ಷಣ್ಮುಖಪ್ಪ, ಬಿಇಒ ಎನ್.ಸಿ. ನಂಜರಾಜ ಸೇರಿದಂತೆ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ.

ಕೃಷಿ ಮೇಳದ ಪ್ರಮುಖ ಆಕರ್ಷಣೆ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಪ್ರಖ್ಯಾತ ಹಳ್ಳಿಕಾರ್ ಬಲಿಷ್ಠ ಬೀಜದ ಹೋರಿ ಪ್ರದರ್ಶನವೂ ಕೂಡ ಈ ಮೇಳದ ವಿಶೇಷತೆಯಾಗಿರುತ್ತದೆ ಎಂದು ಕರಿಬಸಪ್ಪ ವಿವರಿಸಿದರು. 

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಆರ್.ಎಸ್. ರುದ್ರಪ್ಪ, ಗೌರವಾಧ್ಯಕ್ಷ ದಿಳ್ಳಿ ಭರ್ಮಪ್ಪ, ದ್ಯಾಮಪ್ಪ, ಬಸವರಾಜಪ್ಪ, ಶೇಖರಪ್ಪ, ಅರಬಗಟ್ಟೆ ಸತೀಶ್, ಗೌರಪ್ಪ, ಬಸವರಾಜು, ಬಸವನಹಳ್ಳಿ ಎನ್.ಸಿ. ದೇವರಾಜ್, ಗ್ರಾ.ಪಂ. ಸದಸ್ಯರಾದ ಕೆಂಚಪ್ಪ, ರುದ್ರಪ್ಪ ನಾಗರಾಜ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!