ದಾವಣಗೆರೆ, ಅ. 24 – ಮಹರ್ಷಿ ವಾಲ್ಮೀಕಿ ಜಯಂತಿಯ ಒಳಗೆ ಚನ್ನಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪನೆ ಮಾಡದೇ ಇದ್ದರೆ ಜಿಲ್ಲಾಡಳಿತ ಆಯೋಜಿಸಲಾಗಿರುವ ಜಯಂತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲಾಗುವುದು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ಮಂಜುನಾಥ್ ಚಿಕ್ಕಿ, ಜಿಲ್ಲಾಡಳಿತ ಪ್ರತಿಮೆ ಸ್ಥಾಪಿಸಲು ಇನ್ನೂ ಕಾಲಾವಕಾಶ ಇದೆ. ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ನಾಡಿದ್ದು ದಿನಾಂಕ 26ರ ಗುರುವಾರ ನಗರದಲ್ಲಿ ಬೈಕ್ ರಾಲಿಯನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10.30ಕ್ಕೆ ಬೈಕ್ ರಾಲಿಗೆ ನಗರದ ಹೊಂಡದ ಸರ್ಕಲ್‌ನಲ್ಲಿ ವಾಲ್ಮೀಕಿ ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ವಿನಾಯಕ ಪೈಲ್ವಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಸಮಾಜದ ಮುಖಂಡರಾದ ಪ್ರವೀಣ್ ಶಾಮನೂರು, ಲಿಂಗರಾಜ್ ಫಣಿಯಾಪುರ, ಕರೂರು ಹನುಮಂತಪ್ಪ, ಹದಡಿ ರಾಜಪ್ಪ, ಶ್ರೀನಿವಾಸ್ ಗುಮ್ಮನೂರು, ಹೂವಿನಮಡು ಪ್ರವೀಣ್, ಸುರೇಶ್ ಗೋಶಾಲೆ ಮುಂತಾದವರು ಉಪಸ್ಥಿತರಿದ್ದರು.