ಅರ್ಥಪೂರ್ಣ ಮಹರ್ಷಿ ವಾಲ್ಮೀಕಿ ಜಯಂತಿಗೆ ಸಹಕಾರ ಅಗತ್ಯ

ಅರ್ಥಪೂರ್ಣ ಮಹರ್ಷಿ ವಾಲ್ಮೀಕಿ ಜಯಂತಿಗೆ ಸಹಕಾರ ಅಗತ್ಯ

ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಕರೆ

ಹರಪನಹಳ್ಳಿ, ಅ.22- ಭಾರತೀಯ ಸಂಸ್ಕೃತಿಗೆ, ಮಾನವಿಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ, ದಾರ್ಶನಿಕ ಮಹರ್ಷಿ ವಾಲ್ಮೀಕಿ ಜಯಂತಿಯನ್ನು  ಸಮಾಜದ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನ ದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ  ಆಯಾ ಜಾತಿಗಳು ಜಾಗೃತರಾಗುತ್ತಿದ್ದು, ವಾಲ್ಮೀಕಿ ನಾಯಕ ಸಮಾಜದವರು ಮಹರ್ಷಿ ವಾಲ್ಮೀಕಿ ಯವರ ಹೆಸರಿನಲ್ಲಿ ಜಾಗೃತರಾಗಬೇಕಿದೆ. ನಾವು ಪಕ್ಷ ಭೇದ ಮರೆತು ಒಂದಾಗಬೇಕಿದೆ. ಶಿಕ್ಷಣ ಕಲಿತು ದುಶ್ಚಟಗಳಿಂದ ದೂರವಾಗಿರಬೇಕು. ಯುವಕರು ಶಿಕ್ಷಣ ಬಿಟ್ಟು ಹೋರಾಟದ ಹಾದಿ ತುಳಿಯುತ್ತಿರುವುದು ಸರಿಯಲ್ಲ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರಸಿಕೇರಿಯ ವೈ.ಡಿ.ಅಣ್ಣಪ್ಪ ಮಾತನಾಡಿ, ಕೇವಲ ಜಯಂತಿ, ಉತ್ಸವಗಳನ್ನು ಆಚರಿಸಿ, ಅವರ ಆದರ್ಶಗಳನ್ನು ಮರೆಯುವುದಲ್ಲ. ಅವರು ಕೊಟ್ಟಂತಹ ತತ್ವಾ ದರ್ಶಗಳನ್ನು  ನಾವು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಶೈಕ್ಷಣಿಕವಾಗಿ ಬೆಳವಣಿಗೆಯಾಗ ಬೇಕು. ಆ ಮೂಲಕ ಆರ್ಥಿಕವಾಗಿ ಸುಧಾರಣೆಗೊಂಡು ಸಾಮಾಜಿಕವಾಗಿ ಬದಲಾವಣೆಯಾಗಬೇಕು ಎಂದು ಹೇಳಿದರು.

ಮುಖಂಡ ಫಣಿಯಾಪುರ ಲಿಂಗರಾಜ್ ಮಾತನಾಡಿ, ಈಗಾಗಲೇ ವಾಲ್ಮೀಕಿ ಸಮುದಾಯ ಭವನಕ್ಕೆ  ಹೆಚ್ಚುವರಿಯಾಗಿ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸಮಾಜದ ಅಧ್ಯಕ್ಷರು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರಸಿಕೇರೆಯ ವೈ.ಡಿ.ಅಣ್ಣಪ್ಪ ಅವರ ನೇತೃತ್ವದಲ್ಲಿ  ಉಳಿದ ಕಾಮಗಾರಿ  ಗುಣಮಟ್ಟದಲ್ಲಿ ಮಾಡಬೇಕು  ಎಂದರು.

ವಾಲ್ಮೀಕಿ ನಾಯಕ ಸಮಾಜದ  ಮಾಜಿ ಅಧ್ಯಕ್ಷ  ಹಲವಾಗಲು ಎಚ್.ಟಿ. ಗಿರೀಶಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್, ವಾಲ್ಮೀಕಿ ನಾಯಕ ಮಹಿಳಾ ಘಟಕದ ಅಧ್ಯಕ್ಷರಾದ  ಕಂಚಿಕೇರಿ ಜಯಲಕ್ಷ್ಮಿ, ಗೌರವ ಅಧ್ಯಕ್ಷರಾದ ಟಿ.ಪದ್ಮಾವತಿ, ಏಕಲವ್ಯ ಸಂಘರ್ಷ  ಸಮಿತಿ  ಅಧ್ಯಕ್ಷ  ಆರ್.ಪ್ರಕಾಶ್ ಹಲವಾಗಲು ಎಚ್.ಟಿ. ವನಜಾಕ್ಷಮ್ಮ ಮಾತನಾಡಿದರು.

ನಿವೃತ್ತ ಶಿಕ್ಷಕ ಆನಂದಪ್ಪ, ವಕೀಲರಾದ ಜಿಟ್ಟಿನಕಟ್ಟಿ ಎಚ್.ಕೆ. ಮಂಜುನಾಥ್‌, ಕೆಂಗಳ್ಳಿ ಪ್ರಕಾಶ್‌, ಮುಖಂಡರಾದ ಗಿಡ್ಡಳ್ಳಿ ನಾಗರಾಜ್‌, ದ್ಯಾಮಜ್ಜಿ ದಂಡೆಪ್ಪ, ಬಂಗಿ ಚಂದ್ರಕಾಂತ,  ಮಂಡಕ್ಕಿ ಸುರೇಶ್, ಗುಂಡಗತ್ತಿ ನೇತ್ರಾವತಿ, ಮಂಜುಳಾ, ಶೋಭಾ, ಉಪನ್ಯಾಸಕ ಜಿಟ್ಟನಕಟ್ಟಿ ಕೊಟ್ರೇಶ್ ಸೇರಿದಂತೆ ಇತರರು ಇದ್ದರು.

error: Content is protected !!