ಹರಿಹರ, ಅ.18- ಕವಯತ್ರಿ ಡಾ. ಪಿ ವೀಣಾ ಅವರು ನಾಡಹಬ್ಬ ದಸರಾ ಅಂಗವಾಗಿ ನಡೆ ಯಲಿರುವ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಾಳೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಕವಯತ್ರಿ ಚ. ಸರ್ವಮಂಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಾದೇಶಿಕ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಕವನ ವಾಚಿಸಲಿ ದ್ದಾರೆ. ಕವಿ ಎಸ್. ಜಿ. ಸಿದ್ದರಾಮಯ್ಯ ಗೋಷ್ಠಿ ಉದ್ಘಾಟಿಸುವರು.