ಹರಪನಹಳ್ಳಿಯಲ್ಲಿ ವಿಶೇಷ ದಸರಾ ಹಬ್ಬ

ಹರಪನಹಳ್ಳಿಯಲ್ಲಿ ವಿಶೇಷ ದಸರಾ ಹಬ್ಬ

ಹರಪನಹಳ್ಳಿ, ಅ.18- ಪಟ್ಟಣದ ಆಚಾರ್ಯ ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಡಾ. ರಮೇಶ್ ಕುಮಾರ್ ದಂಪತಿ ನವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ದಸರಾ ಹಬ್ಬವನ್ನು ನವಗ್ರಹಗಳ ಮೂಲಕ ವಿಶೇಷ ಪೂಜೆಯೊಂದಿಗೆ ಆಚರಿಸುತ್ತಿದ್ದಾರೆ.

ದಸರಾ ಹಬ್ಬ ಶುರುವಾಗುವುದಕ್ಕೆ ಮೊದಲು ಬೊಂಬೆಗಳನ್ನು ಚೊಕ್ಕು ಮಾಡಿ, ಅಣಿ ಮಾಡಿ ಕೊಂಡು ಹಬ್ಬ ಆರಂಭವಾದ ದಿನದಿಂದ ಪ್ರತಿನಿತ್ಯ ದೇವರಿಗೆ ದೀಪ ಬೆಳಗಿ ಪಟ್ಟದ ಬೊಂಬೆಗಳನ್ನು  ಜೋಡಿಸಿಕೊಂಡು  ಹಿಂದೆಲ್ಲ  ಇದರ ಜೊತೆ ಹಲ ವಾರು  ಬೊಂಬೆಗಳನ್ನು ಕೂಡ ಮೆಟ್ಟಲು ಮಾಡಿ ಜೋಡಿಸಿ ಹಿಂದೂ ಸಂಪ್ರದಾಯದಂತೆ ಆಚರಿಸುತ್ತಿದ್ದರು.

9 ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ ದೇವಿಯ ಹೆಸರಿನಲ್ಲಿ ವಿವಿಧ ರೀತಿಯ ಸಿಹಿ ಪದಾರ್ಥವನ್ನು ನೈವೇದ್ಯ ಮಾಡಲಾಗಿತ್ತು. 

ಪ್ರತಿದಿನ ದೇವಿಯ ಶ್ಲೋ ಕಗಳನ್ನು ಹೇಳುತ್ತಾ, ದೇವಿ ಮಹಾತ್ಮೆ ಪುರಾಣ ವನ್ನು ಪಠಣ ಮಾಡುತ್ತಾ, ಲಲಿತ ಸಹಸ್ರನಾಮ, ಸೌಂದರ್ಯ ಲಹರಿ ಇಂತಹ ಅನೇಕ ಪೂಜೆ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿ ದ್ದೇವೆ ಎಂದು ಡಾ. ರಮೆಶ್ ಕುಮಾರ್ ದಂಪತಿ ಪತ್ರಿಕೆಗೆ ತಿಳಿಸಿದ್ದಾರೆ.

error: Content is protected !!