ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದಲ್ಲಿ ನಡೆಯುತ್ತಿರುವ ಶರನ್ನವರಾತ್ರ್ಯುತ್ಸವದ ಅಂಗವಾಗಿ ಇಂದು ಬೆಳಿಗ್ಗೆ 8.30 ಕ್ಕೆ ಸ್ಕಂದ ಮಾತಾ ಆರಾಧನೆ, 10 ಗಂಟೆಗೆ ಚಂಡಿಕಾ ಹೋಮ, ಸುಮಂಗಲಿ, ಕನ್ನಿಕಾ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂರ್ಣಾಹುತಿ, ಪ್ರಸಾದ ವಿನಿಯೋಗ.
ಸಂಜೆ 6 ಗಂಟೆಗೆ ದುರ್ಗಾದೀಪ ನಮಸ್ಕಾರ ಅಷ್ಟಾವಧಾನ ಸೇವೆ, ಸಪ್ತಶತಿ ಪಾರಾಯಣ, ದೀಪಾರಾಧನೆ, ರಾತ್ರಿ 8.30 ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.