`ನುಸಿ ಪೀಡೆ’ ತಪ್ಪಿಸಲು ತಹಶೀಲ್ದಾರ್‌ ಮೊರೆ ಹೋದ ಹರಿಹರ ಗಂಗಾನಗರ ನಿವಾಸಿಗಳು

`ನುಸಿ ಪೀಡೆ’ ತಪ್ಪಿಸಲು ತಹಶೀಲ್ದಾರ್‌ ಮೊರೆ  ಹೋದ ಹರಿಹರ ಗಂಗಾನಗರ ನಿವಾಸಿಗಳು

ಹರಿಹರ ಅ,17- ಇಲ್ಲಿನ   ಎಪಿಎಂಸಿ ಆವರಣದಲ್ಲಿ ಇರುವಂತಹ ಅಕ್ಕಿ ಗೋಡೌನ್‌ನಲ್ಲಿರುವ ನುಸಿಗಳು ಮತ್ತು ಹುಳುಗಳು   ಗಂಗಾನಗರ ಬಡಾವಣೆಯ ಮನೆಯನ್ನು ಆವರಿಸಿಕೊಂಡು ಊಟ, ನಿದ್ರೆ ಮಾಡುವುದಕ್ಕೂ ತೊಂದರೆ ಆಗುತ್ತಿದೆ.   ನೆಮ್ಮದಿ ಜೀವನ ನಡೆಸುವುದಕ್ಕೆ ಅವಕಾಶ  ಮಾಡಿಕೊಡಬೇಕೆಂದು ಬಡಾವಣೆ  ನಿವಾಸಿಗಳು   ತಹಶೀಲ್ದಾರ್ ಪೃಥ್ವಿ ಸಾನಿಕಂರವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ನಗರಸಭೆ ಸದಸ್ಯ ಎಸ್.ಎಂ. ವಸಂತ ಮಾತನಾಡಿ,  ಈ ವಿಚಾರಕ್ಕೆ ಸಂಬಂಧಿಸಿದಂತೆ   ಅನೇಕ ಬಾರಿ  ಎಪಿಎಂಸಿ ಗೋಡೌನ್ ಅಧಿಕಾರಿಗಳ   ಗಮನಕ್ಕೆ ತಂದರೂ ಸಹಿತ ಅವರು ನಿರ್ಲಕ್ಷ್ಯ ತೋರಿದ್ದರಿಂದ ಇವತ್ತು ತಹಶೀಲ್ದಾರ್ ಕಚೇರಿಗೆ ಬಂದು ಪ್ರತಿಭಟನೆ ಮಾಡಿ ಮನವಿಯನ್ನು ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.  ತಹಶೀಲ್ದಾರರು ನಾಲ್ಕು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ನಾಲ್ಕು ದಿನಗಳ ನಂತರ ಯಾವುದೇ ರೀತಿಯ ಕ್ರಮ ತೆಗೆದು ಕೊಳ್ಳದೇ ಹೋದರೆ, ಮುಂದಿನ ದಿನಗಳಲ್ಲಿ ಎಪಿಎಂಸಿ ಆವರಣದಲ್ಲಿರುವ ಗೋಡೌನ್‌  ಹತ್ತಿರ ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗೌಸಪೀರ್, ರೂಪಾ , ಸರಸ್ವತಿ, ಶೋಭಾ, ಸಂತೋಷ್, ಅಫ್ರಿನ್‌ , ಜಮಾಲುದ್ದೀನ್, ಆಸೀಫ್, ರೋಷನ್, ಮುಸ್ತಫಾ, ಸವಿದಾಬಾನು ಹಾಗು ಇತರರು ಹಾಜರಿದ್ದರು.

error: Content is protected !!