ಸ್ವೆಟ್‌ ಪಾರ್ಕ್‌ ಜಿಮ್‌ನಲ್ಲಿನ ದಾಂಡೀಯಾ ನೃತ್ಯದಲ್ಲಿ ಎಸ್ಸೆಸ್

ಸ್ವೆಟ್‌ ಪಾರ್ಕ್‌ ಜಿಮ್‌ನಲ್ಲಿನ ದಾಂಡೀಯಾ ನೃತ್ಯದಲ್ಲಿ ಎಸ್ಸೆಸ್

ದಾವಣಗೆರೆ, ಅ. 18 – ನಗರದ ಸ್ವೆಟ್‌ ಪಾರ್ಕ್‌ ಜಿಮ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಜಿಮ್‌ ಸದಸ್ಯರುಗಳಿಗೆ ದಾಂಡೀಯಾ ನೃತ್ಯವನ್ನು ಏರ್ಪಡಿಸಲಾಗಿತ್ತು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಸದಸ್ಯರುಗಳ ಜೊತೆ ದಾಂಡೀಯಾದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಜಿಮ್‌ ಮಾಲೀಕ ರೂಪಿತ್‌ ನಾಗರಾಜ್‌, ಮಾಜಿ ಮೇಯರ್‌ ಶ್ರೀಮತಿ ರೇಖಾ ನಾಗರಾಜ್‌, ಪಾಲಿಕೆ ಸದಸ್ಯರಾದ ಎ. ನಾಗರಾಜ್‌, ಮಂಜುನಾಥ ಗಡಿಗುಡಾಳ್‌, ಪಾಲಿಕೆ ಮಾಜಿ ಸದಸ್ಯ ದಿನೇಶ್‌ ಕೆ. ಶೆಟ್ಟಿ, ನಿಖಿಲ್‌ ಶೆಟ್ಟಿ, ರಾಜು ಭಂಡಾರಿ, ಶ್ರೀಕಾಂತ್‌ ಬಗೇರ, ಯುವರಾಜ್‌, ಕಾರ್ತಿಕ್‌, ಮಯೂರ್‌ ಮತ್ತಿತರರು ಉಪಸ್ಥಿತರಿದ್ದರು.

error: Content is protected !!