ಜಗಳೂರು ತಾಲ್ಲೂಕಿನ 33,852 ಕುಟುಂಬಗಳಿಗೆ ತಲುಪಿದ `ಗೃಹಲಕ್ಷ್ಮಿ ಹಣ’

ಜಗಳೂರು ತಾಲ್ಲೂಕಿನ 33,852  ಕುಟುಂಬಗಳಿಗೆ ತಲುಪಿದ `ಗೃಹಲಕ್ಷ್ಮಿ ಹಣ’

ಜಗಳೂರು, ಅ.15- ರಾಜ್ಯದಲ್ಲಿ‌  ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದ್ದು, ಆಗಸ್ಟ್‌ನ ಒಂದು ತಿಂಗಳ ಹಣವು ಯಜಮಾನಿಯರ ಖಾತೆಗೆ ಜಮೆ ಆಗಿದ್ದರೂ, ಆಧಾರ್, ಪಾಸ್ ಬುಕ್, ಪಡಿತರ ಚೀಟಿಯಲ್ಲಿ ಕೆಲವು ತಾಂತ್ರಿಕ ದೋಷವಿರುವ ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ.

ತಾಲ್ಲೂಕಿನ ಹಲವು ಮನೆ ಯಾಜಮಾನಿಯರ ಖಾತೆಗೆ ಹಣ ಜಮೆಯಾಗದ ಕಾರಣ ನಿತ್ಯವು ಪರಿತಾಪಿಸುವಂತಾಗಿದೆ.

`ತಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಏನ್ ಆಗಿದೆ’ ಸಮಸ್ಯೆ ಎಂದು ಆಧಾರ್ ಕಾರ್ಡ್, ಪಾಸ್ ಬುಕ್ ಹಿಡಿದು ಗ್ರಾಮ ಒನ್ ಕೇಂದ್ರಗಳು, ಬ್ಯಾಂಕ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಲೆದಾಡುವುದು ಮಹಿಳೆಯರಿಗೆ ತಪ್ಪಿಲ್ಲ.

ತಾಲ್ಲೂಕಿನಲ್ಲಿ ಅರ್ಹರೆಂದು ಗುರುತಿಸಿಲಾದ 37300 ಮಹಿಳಾ ಫಲಾನುಭವಿಗಳಲ್ಲಿ 35487 ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿದ್ದು, 33852 ಜನರ ಖಾತೆಗೆ ಹಣ ಜಮೆಯಾಗಿದೆ. 3313 ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಹಣ ಜಮೆಯಾಗಿಲ್ಲ. ಅಂತಹ ಫಲಾನುಭವಿಗಳಿಗೆ ತಾಂತ್ರಿಕ ಕಾರಣ ಸರಿಪಡಿಸಿಕೊಳ್ಳಲು ಇಲಾಖೆಯವರು ಕೆರೆ ಮೂಲಕ ಗಮನಕ್ಕೆ ತಂದಿದ್ದಾರೆ. ಅಲ್ಲದೆ 244 ಫಲಾನುಭವಿಗಳಿಗೆ ಪೇಮೆಂಟ್ ರಿಜೆಕ್ಟ್ ಆಗಿದೆ.

ಪಡಿತರ ತಿದ್ದುಪಡಿ  ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ನಕಾರ : ಹೌದು ತಾಲ್ಲೂಕಿನಲ್ಲಿ  ಸಾವಿರಾರು ಅರ್ಹ ಫಲಾನುಭವಿಗಳು ಇನ್ನೂ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಪಡಿತರ ಚೀಟಿಯಲ್ಲಿ ಯಜಮಾನಿಯ ಸ್ಥಳದಲ್ಲಿ ಪುರುಷರು, ಮರಣ ಹೊಂದಿದ್ದ ಯಾಜಮಾನಿಯರನ್ನು ಕಾರ್ಡ್‌ನಲ್ಲಿ ಹೊಸದಾಗಿ ಡಿಲಿಟ್ ಮಾಡಿಸಿ, ಕಾರ್ಡ್ ತಿದ್ದುಪಡಿ ಮಾಡಿಸಿದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ಸಾಪ್ಟ್‌ವೇರ್‌ನಲ್ಲಿ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಈ ಫಲಾನುಭವಿಗಳು ವಾರಕ್ಕೆ ನಾಲ್ಕೈದು ಬಾರಿ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರು ಪ್ರಯೋಜನವಿಲ್ಲ.

ತಾಂತ್ರಿಕ ಕಾರಣವಿರುವ  ಫಲಾನುವಿಗಳಿಗೆ ಬಾರದ ಹಣ : ತಾಲ್ಲೂಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಪಡಿತರ ಚೀಟಿಗಳಲ್ಲಿ ಫಲಾನುಭವಿಗಳ ಹೆಸರು ಒಂದೇ ಆಗಿರಬೇಕು. ಒತ್ತಕ್ಷರಗಳು ಮಿಸ್ ಆದರೂ ಡಿಬಿಟಿಯಲ್ಲಿ  ಡಾಟಾ ಮಿಸ್ ಮ್ಯಾಚ್ ಆಗಿ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲದೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಎನ್‌ಪಿಸಿಐ ಆಗದೆ ಹಲವು ತಾಂತ್ರಿಕ ಕಾರಣ ಇರುವವರಿಗೆ ಹಣ ಜಮೆಯಾಗಿಲ್ಲ.

ಇಂತಹ ಸಮಸ್ಯೆ ಎದುರಿಸುವವರಿಗೆ ಇಲಾಖೆಯಿಂದ ಕರೆ ಮಾಡಿ ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಕಾರ್ಡ್ ತಿದ್ದುಪಡಿ ಮಾಡಿಸಿದವರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿಲ್ಲ. ಕಾರಣ ಆಹಾರ ಇಲಾಖೆ ಸಾಫ್ಟ್‌ವೇರ್‌ನಿಂದ ಗೃಹಲಕ್ಷ್ಮಿ ಸಾಫ್ಟ್‌ವೇರ್‌ಗೆ ಫಲಾನುಭವಿಗಳ ಡಾಟಾ ವರ್ಗಾವಣೆಯಾಗಬೇಕಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಅರ್ಜಿ ಸಲ್ಲಿಸುವವರು ಕಾಯಬೇಕಿದೆ. ಅರ್ಜಿ ಸಲ್ಲಿಸಲು ಸರ್ಕಾರ ಕೊನೆ ದಿನ ನಿಗದಿ ಮಾಡಿಲ್ಲ. ತಾಂತ್ರಿಕ ಕಾರಣ ಎದುರಿಸುವವರಿಗೆ ಇಲಾಖೆಯಿಂದ ಕೆರೆ ಮಾಡಿ ಸರಿಪಡಿಸಲು ಸೂಚಿಸಲಾಗಿದೆ. ಗೃಹಲಕ್ಷೀ ಯೋಜನೆ ಕುರಿತು ಏನೇ  ಸಮಸ್ಯೆಗಳಿದ್ದರು ಫಲಾನುಭವಿಗಳು ಇಲಾಖೆ ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!