ದಾವಣಗೆರೆ, ಅ.15- ನಗರದ ಪಿ.ಬಿ ರಸ್ತೆಯ ಕಬ್ಬೂರ್ ಫರ್ನಿಚರ್ಸ್ನಲ್ಲಿ ಮೂಡ ಬ್ರಾಂಡ್ನ ನೂತನ ಫ್ರ್ಯಾಂಚೈಸಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಇಂದು ಉದ್ಘಾಟಿಸಿ, ಶುಭ ಹಾರೈಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಕಬ್ಬೂರ್ ಫರ್ನಿಚರ್ಸ್ನ ವಿಶ್ವಾಸ್ ಕಬ್ಬೂರ್, ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಮೂಡ ಬ್ರಾಂಡ್ನ ಪೀಠೋಪಕರಣ ಖರೀದಿಯ ಮೇಲೆ ಶೇ.40 ರಷ್ಟು ರಿಯಾಯಿತಿ ನೀಡಲಾಗಿದೆ. 2.5 ಲಕ್ಷ ಮೊತ್ತದ ಪೀಠೋಪಕ ರಣ ಖರೀದಿಸುವ ಗ್ರಾಹಕರಿಗೆ 1 ಗ್ರಾಂ ಬಂಗಾರದ ನಾಣ್ಯ ನೀಡಲಾಗುವುದು ಎಂದರು.
ಮೂಡ ಬ್ರಾಂಡ್ `ಮೇಕ್ ಇನ್ ಇಂಡಿಯಾ’ ಕನಸನ್ನು ಸಾಕಾರಗೊಳಿಸಿದ್ದು, ಇಲ್ಲಿ ಟೀಕ್, ಸಿರೀಶ್ ವುಡ್ ನ ಉತ್ತಮ ಗುಣಮಟ್ಟದ ಡೈನಿಂಗ್ ಟೇಬಲ್, ಬೆಡ್, ಸೋಫಾ ಸೆಟ್ ಸೇರಿದಂತೆ ನಾನಾ ಆಕರ್ಷಕ ಗೃಹಪಯೋಗಿ ಪೀಠೋಪಕರಣಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ಹೇಳಿದರು.
ಈ ವೇಳೆ ದಿಲ್ಲಿಯ ಕೃಷ್ಣ ಫರ್ನಿಚರ್ನ ವ್ಯವಸ್ಥಾಪಕ ಮಹೇಶ್ ಚಂದ್ ಗೋಯಲ್, ಸಿಇಒ ವಿಕಾಸ್ ಅರೋರಾ, ಕಬ್ಬೂರ್ ಫರ್ನಿ ಚರ್ಸ್ನ ಕಬ್ಬೂರು ಪ್ರಕಾಶ್ ಮತ್ತಿತರರಿದ್ದರು.
July 24, 2024