ಅಶ್ವತ್ಥ್‌ಪುರ ದೇಶಸ್ಥ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ ವೈದ್ಯ ಡಾ. ಸುರೇಶ್‌ಬಾಬು ಆಯ್ಕೆ

ಅಶ್ವತ್ಥ್‌ಪುರ ದೇಶಸ್ಥ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ ವೈದ್ಯ ಡಾ. ಸುರೇಶ್‌ಬಾಬು ಆಯ್ಕೆ

ದಾವಣಗೆರೆ, ಅ. 9- ಅಶ್ವತ್ಥ್ ಪುರ ದೇಶಸ್ಥ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ ಹಿರಿಯ ವೈದ್ಯ ಡಾ. ಪಿ.ಎಸ್. ಸುರೇಶ್  ಬಾಬು ಆಯ್ಕೆಯಾಗಿದ್ದಾರೆ.

 ಕಾರ್ಯದರ್ಶಿಯಾಗಿ ಎಲ್.ವಿ.ಸುಬ್ರಮಣ್ಯ ಹಾಗೂ 21 ಸದಸ್ಯರ ನಿರ್ದೇಶಕ ಮಂಡಳಿಯನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಗರದ ರೋಟರಿ ಬಾಲ ಭವನದಲ್ಲಿ ನಡೆದ ಅಶ್ವತ್ಥ್ ಪುರ ದೇಶಸ್ಥ ಬ್ರಾಹ್ಮಣ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಸಮಾಜದ ಮುಂದಿನ ಮೂ ವರು ವರ್ಷಗಳ ಅವಧಿಗೆ ಈ ಆಯ್ಕೆ ನಡೆಯಿತು.

ಈ ಸಂದರ್ಭದಲ್ಲಿ ಸಮಾಜದ ನೂತನ ಅಧ್ಯಕ್ಷ ಡಾ. ಪಿ.ಎಸ್. ಸುರೇಶ್ ಬಾಬು ಮಾತನಾಡಿ, ಸಮಾಜದ ಬಡವರಿಗೆ ಆರೋಗ್ಯ ಕಲ್ಪಿಸಲು `ಆರೋಗ್ಯ ನಿಧಿಯನ್ನು’ ಈ ಸಂದರ್ಭದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು.

ಹಣಕಾಸಿನ ತೊಂದರೆ, ಶಸ್ತ್ರ ಚಿಕಿತ್ಸೆಗಳಲ್ಲಿ, ಅವಶ್ಯಕತೆ ಇರುವ ಸಮಾಜದ ಕಡುಬಡವರಿಗೆ ಹಣಕಾಸಿನ ವ್ಯವಸ್ಥೆ ಮಾಡಲು ಈ ಆರೋಗ್ಯ ನಿಧಿ ತುಂಬಾ ಸಹಾಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ನುಡಿದರು.

ಇದೇ ಸಂದರ್ಭದಲ್ಲಿ  ದೊಡ್ಡಬಾತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿಯಾದ ಶ್ರೀಮತಿ ಉಷಾ ಶ್ರೀಧರ್ ಅವರನ್ನು ಈ ಸಂದರ್ಭದಲ್ಲಿ ಗುರುವಂದನೆ ನೀಡಿ ಗೌರವದಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಉಷಾ ಶ್ರೀಧರ್ ಅವರು, ಓದುವುದರಲ್ಲಿ ಈಗಿನ ವಿದ್ಯಾರ್ಥಿಗಳಲ್ಲಿ ಬಹಳವಾದ ಪೈಪೋಟಿ ಇದ್ದು, ಹೆಚ್ಚಿನ ಅಂಕ ಗಳಿಸಿ ತಮ್ಮ ಕಾಲೇಜಿಗೆ ಪೋಷಕರಿಗೆ ಹಾಗೂ ನಮ್ಮ ದೇಶಕ್ಕೆ ಒಳ್ಳೆ ಕೀರ್ತಿಯನ್ನು ತರಲಿ ಎಂದು ನುಡಿದರು.

ಖಜಾಂಚಿ ಉತ್ಸವ ರಾವ್,  ಸಾಂಸ್ಕೃತಿಕ  ಮುಖ್ಯಸ್ಥ ಬಿ.ಟಿ ಚಂದ್ರಶೇಖರ್, ಕ್ರೀಡಾಕೂಟದ ಮುಖ್ಯಸ್ಥ ಪಿ.ಎಲ್. ಶಂಕರ್ ರಾವ್, ಜಿ.ಎಂ.ಐ.ಟಿ. ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ವಸಂತ್ ಕೊಪ್ಲು, ನಿರ್ದೇಶಕರಾದ ವಿಜೇಶ್ ಕೊಲ್ಲೂರು, ರವಿಚಂದ್ರ, ರಜತ್, ರಾಜೇಂದ್ರ, ಮಹೇಶ್, ಅಚ್ಯುತಮೂರ್ತಿ, ಶ್ರೀಮತಿ ವೀಣಾ ಬಾಬು, ಸುಷ್ಮಾ ಚಕ್ರಧರ ಉಪಸ್ಥಿತರಿದ್ದರು. 

ಶ್ರೀಮತಿ ಅಂಬಿಕಾ ಅರುಣ್ ಪ್ರಾರ್ಥಿಸಿದರು. ಅನಿಲ್ ಬಾರೆಂಗಳ್ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ಸ್ವಾಗತಿಸಿದರು. ವಸಂತ್ ಕೊಪ್ಲು ವಂದಿಸಿದರು.

error: Content is protected !!