ನಗರದಲ್ಲಿ ಇಂದು ಶ್ರೀ ಬನ್ನಿ ಮಹಾಂಕಾಳಿ ದೇವಿಗೆ ಅಭಿಷೇಕ

ನಗರದಲ್ಲಿ ಇಂದು ಶ್ರೀ ಬನ್ನಿ ಮಹಾಂಕಾಳಿ ದೇವಿಗೆ ಅಭಿಷೇಕ

ಡಿ. ದೇವರಾಜ ಅರಸು ಬಡಾವಣೆ ಸಿ ಮತ್ತು ಬಿ ಬ್ಲಾಕ್‌ನ ಡಬಲ್ ರೋಡ್‌ನಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನದ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದಂು ಬೆಳಿಗ್ಗೆ 6 ಗಂಟೆಗೆ ಶ್ರೀ ದೇವಿಗೆ ಅಭಿಷೇಕ ಮತ್ತು ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 12 ಗಂಟೆಗೆ ಸದ್ಭಕ್ತರಿಗೆ ಮಹಾ ಪ್ರಸಾದ ಏರ್ಪಾಡಿಸಲಾಗಿದೆ. ಶ್ರೀ ಬನ್ನಿ ಮಹಾಂಕಾಳಿ ದೇವಿ ಸೇವಾ ಸಮಿತಿ ಈ ಕಾರ್ಯಕ್ರಮ ಆಯೋಜಿಸಿದೆ.

error: Content is protected !!