ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ವಾರ್ಷಿಕೋತ್ಸವ : ವಿವಿಧ ಸ್ಪರ್ಧೆಗಳು

ದಾವಣಗೆರೆ, ಅ. 7- ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಹಿತ್ಯ ವೇದಿಕೆಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಗೀತ ಗಾಯನ ಸ್ಪರ್ಧೆ (ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ ಕುರಿತು)ಯಲ್ಲಿ ಕನಿಷ್ಟ 4 ವಿದ್ಯಾರ್ಥಿಗಳು ಹಾಗೂ ಗರಿಷ್ಟ 6 ವಿದ್ಯಾರ್ಥಿಗಳಿರಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಎಂದು ಎರಡು ವಿಭಾಗಗಳಿದ್ದು, ಪ್ರತ್ಯೇಕವಾಗಿ ಬಹುಮಾನಗಳ್ನು ವೇದಿಕೆಯ ಸಮಾರಂಭದಂದು ನೀಡಲಾಗುವುದು. 

ಮಾಜಿ ಶಿಕ್ಷಣ ಸಚಿವೆ ಶ್ರೀಮತಿ ಡಾ. ಸಿ. ನಾಗಮ್ಮ ಕೇಶವಮೂರ್ತಿ ಅವರ ಬದುಕು ಮತ್ತು ಸಾಧನೆ ಕುರಿತು ನಡೆಯುವ ಪ್ರಬಂಧ ಸ್ಪರ್ಧೆಯಲ್ಲಿ ಎ4 ಹಾಳೆಯ ಮೂರು ಪುಟಗಳ ಮಿತಿಯಲ್ಲಿ ಪ್ರಬಂಧ ಬರೆದು ಇದೇ ದಿನಾಂಕ 20ರ ರೊಳಗೆ ಮಲ್ಲಮ್ಮ ನಾಗರಾಜ್, ಮಾಂಟೆಸೊರಿ ಕಾನ್ವೆಂಟ್, ಕೆ.ಬಿ. ಬಡಾವಣೆ, ದಾವಣಗೆರೆ ಇಲ್ಲಿಗೆ ತಲುಪಿಸಲು ಕೋರಲಾಗಿದೆ. ವಿವರಗಳಿಗೆ 99801 48289ಗೆ ಸಂಪರ್ಕಿಸಬಹುದಾಗಿದೆ.

error: Content is protected !!